ಎಸೆದರೆ ಚಿಗುರುವ ಮಾಸ್ಕ್..!
ಕೊರೊನಾ ಸೋಂಕಿನ ನಿಯಂತ್ರಣದ ಸಲುವಾಗಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಾಸ್ಕ್ ಗಳು ಬಂದಿವೆ. ಮಂಗಳೂರು ಸಮೀಪದ ಗ್ರಾಮಾಂತರ ಪ್ರದೇಶದ ಯುವಕನೊಬ್ಬ ಪರಿಸರ ಸ್ನೇಹಿ ಮಾಸ್ಕ್ ನಿರ್ಮಿಸಿ ದೇಶದಾದ್ಯಂತ ಗಮನ ಸೆಳೆದಿದ್ದಾನೆ.
ಈ ವಿನೂತನ ಮಾಸ್ಕ್ ನಲ್ಲಿ ಸಸ್ಯದ ಬೀಜಗಳನ್ನು ಅಳವಡಿಸಲಾಗಿದ್ದು, ಮಾಸ್ಕ್ ಬಳಸಿ ಬಿಸಾಡಿದಾಗ ಮಾಸ್ಕಿನಲ್ಲಿ ಅಳವಡಿಸಲಾದ ತರಕಾರಿ ಬೀಜಗಳು ಗಿಡವಾಗಿ ಬೆಳೆಯುತ್ತವೆ. ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಬಳಕೆಗೆ ಶಿಫಾರಸು ಮಾಡಲಾಗಿದೆ. ಜನರು ಮಾಸ್ಕ್ ಬಳಸಿ ಬಿಸಾಡುವುದರಿಂದ ಮಣ್ಣಲ್ಲಿ ಕರಗದೆ ಮತ್ತೆ ಪರಿಸರ ಮಾಲಿನ್ಯ ಹೆಚ್ಚಾಗುವ ಸಾಧ್ಯತೆ. ಇದನ್ನು ಮನಗಂಡ ಮಂಗಳೂರು ತಾಲೂಕಕು ಕೆಮ್ರಾಲ್ ಗ್ರಾಮ ಪಂಚಾಯತಿನ ಪಕ್ಷಿಕೆರೆಯ ಉತ್ಸಾಹಿ ಯುವಕ ನಿತಿನ್ ವಾಸ್ ಹತ್ತಿಯ ಪಲ್ಪ್ ಬಳಸಿ ಪರಿಸಹ್ಯ ಮಾಸ್ಕ್ ತಯಾರಿಸಿ ವಿತರಿಸಿದ್ದಾರೆ.
ಮೈಸೂರು ಕಾವಾ ಕಾಲೇಜಿನಲ್ಲಿ ಕಲಾ ವಿದ್ಯಾಭ್ಯಾಸ ಮಾಡಿರುವ ನಿತಿನ್, ನಾಲ್ಕು ವರ್ಷಗಳ ಹಿಂದೆ ಪೇಪರ್ ಸೀಡ್ ಎಂಬ ಸಮಾಜಸೇವಾ ಉದ್ಯಮ ಆರಂಭಿಸಿ ಪರಿಸರ ಪ್ರೇಮಿ ಗೊಂಬೆಗಳು, ಪೇಪರ್, ಆಲಂಕಾರಿಕ ಸಾಧನ, ಪೇಪರಿಂದ ಮಾಲಾದ ಪೆನ್, ಹಳೆ ಪೇಪರ್ ಉಪಯೋಗಿಸಿದ ಪೆನ್ಸಿಲ್ ತಯಾರಿಸುತ್ತಿದ್ದರು. ಇಂತಹ ಪೆನ್ಸಿಲ್ ಗಳ ತುದಿಯಲ್ಲಿ ವಿವಿಧ ಬೀಜಗಳನ್ನು ಇರಿಸಲಾಗಿದ್ದು, ಉಪಯೋಗಿಸಿ ಬಿಸಾಡಿದಲ್ಲಿ ಗಿಡಗಳು ಬೆಳೆಯಲು ಸಹಾಯ ಆಗುತಿತ್ತು. ಹತ್ತಿಯಿಂದ ರಚಿಸಿರುವ ಈ ಮಾಸ್ಕ್ ಪರಿಸರಸ್ನೇಹಿಯಾಗಿದೆ. ಬಿಸಾಡುವ ಹತ್ತಿಯನ್ನೇ ಬಳಸಿ ತಯಾರಿಸಿರುವ ಮಾಸ್ಕ್ ಸಿದ್ಧಪಡಿಸಲಾಗುತ್ತದೆ. ವೇಸ್ಟ್ ಹತ್ತಿಯನ್ನು ಸಂಗ್ರಹಿಸಿ ಸಂಸ್ಕರಿಸಿ ನೀರಿನಲ್ಲಿ ಕೆಲವು ಇರಿಸಿ ಪಲ್ಪ್ ತಯಾರಿಲಾಗುತ್ತದೆ. ಅಂತರ ಪೇಪರ್ ಶೀಟ್ ತಯಾರಿಸಿ, ಅದನ್ನು 12 ಗಂಟೆ ಒಣಗಿಸಿ ಮಾಸ್ಕ್ ತಯಾರಿಸಲಾಗುತ್ತದೆ. ಮಾಸ್ಕ್ ಹಿಂಭಾಗಕ್ಕೆ ತೆಳು ಕಾಟನ್ ಬಟ್ಟೆ ಹಾಕಲಾಗುತ್ತದೆ. ಮಾಸ್ಕ್ ದಾರಗಳನ್ನೂ ಕಾಟನ್ ನಿಂದಲೇ ಮಾಡಲಾಗುತ್ತದೆ.
ಮಾಸ್ಕ್ ತಯಾರಿಸುವ ಶೀಟಿನಲ್ಲಿ ಮದೊಲೇ ಟೊಮೊಟೊ, ತುಳಸಿ, ಬೆಂಡೆಕಾಯಿ ಇತ್ಯಾದಿ ಸಸ್ಯಗಳ ಬೀಜ ಸೇರಿಸಲಾಗಿರುತ್ತದೆ. ಇದು ಒಮ್ಮೆ ಬಳಸಿ ಬಿಸಾಡುವ ಮಾಸ್ಕ್ ಆಗಿದ್ದು, ಉಪಯೋಗಿಸಿದ ಅನಂತರ ಮಣ್ಣಲ್ಲಿ ಸುಲಭವಾಗಿ ಕರಗುತ್ತದೆ ಹಾಗೂ ಅದರ್ರಲ್ಲಿ ತುಳಸಿ, ಟೊಮೆಟೊ ಹರಿವೆಯಂತಹ ಸಸ್ಯಗಳು ಮೊಳಕೆಯೊಡುತ್ತವೆ. ಇದೊಂದು ವಿನೂತನ ಸಾಮಾಜಿಕ ಉದ್ಯಮ ಆಗಿದ್ದು, ಕೇಂದ್ರ ಸರಕಾರದ ಸಚಿವಾಲಯಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲಾಡಳಿತ ಕೂಡ ಬೆಂಬಲ ವ್ಯಕ್ತಪಡಿಸಿದೆ ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಸಂಯೋಜಕ ರಘುವೀರ್ ಸೂಟರ್ ಪೇಟೆ ಹೇಳಿದರು.
ನಿತಿನ್ ವಾಸ್ ಮತ್ತು ಗೆಳೆಯರು ಪೇಪರ್ ಸೀಡ್ ಎಂಬ ಉದ್ಯಮ ಸಂಸ್ಥೆ ಹೊಂದಿದ್ದು, ಲಾಕ್ ಡೌನ್ ಮೊದಲು ಹಲವು ಮಂದಿಗೆ ಉದ್ಯೋಗ ನೀಡಿದ್ದರು. ಆದರೆ, ಲಾಕ್ ಡೌನ್ ಅವಧಿಯಲ್ಲಿ ಎಲ್ಲವೂ ನಷ್ಟವಾಗಿದ್ದು, ಈಗ ಉತ್ಪಾದನೆ ಸ್ಥಗಿತ ಮಾಡಿದ್ದಾರೆ. ಪೇಪರ್ ಸೀಡ್ ಮಾಸ್ಕಿಗೆ ದೇಶ ವಿದೇಶಗಳಿದಂಲೂ ಬೇಡಿಕೆ ಇತ್ತು