ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯ ವಿಖಾಯದಿಂದ ರಕ್ತದಾನ ಶಿಬಿರ ಹಾಗೂ ಕೊರೊನಾ ವಾರಿಯರ್ಸ್‌ಗೆ ಸನ್ಮಾನ

ಗುರುಪುರ: ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯ ವಿಖಾಯ ವತಿಯಿಂದ ಬ್ರಹತ್ ರಕ್ತದಾನ ಶಿಬಿರ ಹಾಗೂ ಕೊರೊನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ಆದಿತ್ಯವಾರ ಗುರುಪುರ ಕೈಕಂಬ ಪ್ರೀಮಿಯರ್ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಲಯ ಅಧ್ಯಕ್ಷರಾದ ಬಹು: ಜಮಲುದ್ದೀನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಬಹು:ಝುಬೈರ್ ಫೈಝಿ ಅಂಕೋಲಾ ದುಆ: ನೆರವರಿಸಿದರು. ಸಮಸ್ತ ಕೇರಳ ಜಮಿಯತುಲ್ ಉಲೆಮಾ ಕೇಂದ್ರ ಮುಶಾವರ ಸದಸ್ಯರಾದ ಬಾಂಬ್ರಣ ಉಸ್ತಾದ್ ರವರು ಉದ್ಘಾಟಿಸಿದರು. ಕೋವಿದ್ ಸಂದರ್ಭದಲ್ಲಿ ಕೋವಿದ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ರಕ್ತದಾನ ಶಿಬಿರವನ್ನು ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೈಕಂಬ ವಲಯದ 23 ಶಾಖೆ ಗಳ ಕಾರ್ಯಕರ್ತರು ರಕ್ತದಾನ ಮಾಡಿದರು.


ವಲಯ ಕಾರ್ಯದರ್ಶಿ ಆರೀಫ್ ಕಮ್ಮಾಜೆ ಸ್ವಾಗತಿಸಿದರು. ಕಾರ್ಯಕ್ರಮ ದಲ್ಲಿ ಹಲವಾರು ಸಾಮಾಜಿಕ ಧಾರ್ಮಿಕ ನೇತಾರರು ಬಾಗವಹಿಸಿದ್ದರು. ವಲಯ ವಿಖಾಯ ಚೇರ್ಮನ್ ಇಬ್ರಾಹಿಂ ಕುಕ್ಕಟ್ಟೆ ಧನ್ಯವಾದಗೈದರು ಮುಸ್ತಫಾ ಸೈಟ್ ರವರ ಉಸ್ತುವಾರಿಯಲ್ಲಿ ಕಾರ್ಯಕ್ರಮ ನಡೆಯಿತು. ಸಾಝಿಲ್ ಉಲೈಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

 

Related Posts

Leave a Reply

Your email address will not be published.