ಕಡಬದ ಪೆರಾಬೆಯಲ್ಲಿ ಅನುಮಾನಸ್ಪದ ವ್ಯಕ್ತಿಯ ಬಂಧನ
ಕಡಬ ತಾಲೂಕಿನ ಪೆರಾಬೆ ಗ್ರಾಮದ ಮಾರ್ ಇವಾನಿಯೋಸ್ ಮಹಿಳಾ ಬಿಎಡ್ ಕಾಲೇಜಿನ ಕಟ್ಟಡದ ಹಿಂಬದಿಯಲಲ್ಲಿ ಮುಖಕ್ಕೆ ಬಟ್ಟೆಯನ್ನು ಕಟ್ಟಿ ವ್ಯಕ್ತಿಯ ಗುರುತು ಸಿಗದಂತೆ ಅಡಗಿ ಕುಳಿತುಕೊಂಡೊಬ್ಬನನ್ನು, ರಾತ್ರಿ ಗಸ್ತು ತಿರುಗುತ್ತಿದ್ದ ಕಡಬ ಠಾಣೆಯ ಸಹಾಯಕ ಉಪನರೀಕ್ಷಕರಾದ ಸುರೇಶ್ ಸಿಟಿಯವರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಶರತ್ (34) ಮರವೂರು, ಮಂಗಳೂರು ನಿವಾಸಿ ಎಂದು ಗುರುತಿಸಲಾಗಿದೆ. ಕಡಬ ಠಾಣೆಯ ಸಿಬ್ಬಂದಿಗಳು ಈ ಮಾರ್ಗವಾಗಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಮಹಿಳಾ ಬಿಎಡ್ ಕಾಲೇಜಿನ ಎದುರುಗಡೆಯಿಂದ ಕಟ್ಟಡದ ಹಿಂಬದಿಗೆ ವ್ಯಕ್ತಿಯೊಬ್ಬ ಓಡಿ ಹೋಗುವುದನ್ನು ನೋಡಿದ ಪೊಲೀಸರು, ಜೀಪಿನಿಂದ ಇಳಿದು ಟಾರ್ಜ್ ಬೆಳಕಿನ ಸಹಾಯದಿಂದ ಈ ವ್ಯಕ್ತಿಯನ್ನು ಪತ್ತೆ ಹಚ್ಚಿದರು.ಪೊಲೀಸರು ಈತನನ್ನು ಬಂಧಿಸುವ ಸಮಯದಲ್ಲಿ ತನ್ನ ಟೀ ಶರ್ಟ್ ತೆಗೆದು ಮುಖಕ್ಕೆ ಕಟ್ಟಿಕೊಂಡು ಕಟ್ಟಡದ ಹಿಂಬದಿಯಲ್ಲಿ ಅಡಗಿ ಕುಳಿತುಕೊಂಡಿದ್ದನು.ಪೊಲೀಸರ ತನಿಖೆಯ ಪ್ರಕಾರ ಈತ ಯಾವುದೋ ಅಪರಾಧ ಕೃತ್ಯವನ್ನು ಮಾಡುವ ಉದ್ದೆಶದಿಂದ ಈ ಭಾಗದಲ್ಲಿ ತಿರುಗಾಡುತ್ತಿದ್ದ ಎಂದಿದ್ದಾರೆ. ಇದೀಗ ಈತನ ವಿರುದ್ದ ಕಡಬ ಠಾಣೆಯಲ್ಲಿ ಸಣ್ಣ ಪ್ರಕರಣ ಸಂಖ್ಯೆ 148/2021ಕಲಂ: 96 ಕೆ.ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು, ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.