ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಸ್ತನ್ಯ ಸಪ್ತಾಹ ಆಚರಣೆ
ವಿಶ್ವ ಸ್ತನ್ಯ ಸಪ್ತಾಹ ಆಚರಣೆಯ ಪ್ರಯುಕ್ತ ಮಂಗಳೂರಿನ ಎಸ್.ಸಿ.ಎಸ್. ಸಮೂಹ ಸಂಸ್ಥೆಗಳ ಅಂಗವಾದ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಕೌಮಾರಭೃತ್ಯ ವಿಭಾಗದಿಂದ ವೆಬಿನಾರ್‌ನ್ನು ಆಯೊಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮುಖ್ಯ ಅಧೀಕ್ಷಕರು ಹಾಗೂ ಕೌಮಾರಭೃತ್ಯ ವಿಭಾಗದ ಮುಖ್ಯಸ್ಥರಾದ ಡಾ|| ಲಕ್ಷ್ಮೀಶ ಉಪಾಧ್ಯರು ಮಾತನಾಡಿ “ಮಾತುರೇವ ಪಿಬೇತ್ ಸ್ತನ್ಯಂ” (ಅಮ್ಮನ ಹಾಲನ್ನೆ ಮಗುವಿಗೆ ನೀಡಿ) ಎಂಬ ಕೇಂದ್ರೀಯ ವಿಷಯದ ಬಗ್ಗೆ ಬೆಳಕು ಚೆಲ್ಲಿದರು. ಅಮ್ಮ ಹಾಲುಣಿಸದಿರಲಿರುವ ಕಾರಣಗಳು, ಅವಕ್ಕೆ ಪರಿಹಾರೋಪಾಯಗಳು, ಎದೆ ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿಗೆ ಆಗುವ ಪ್ರಯೊಜನಗಳು ಮತ್ತು ಕೆಲಸಕ್ಕೆ ಹೋಗುವ ಅಮ್ಮಂದಿರಿಗೆ ಸಲಹೆಗಳನ್ನು ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರವಿ ರಾವ್ ಎಸ್, ವಿಶ್ವ ಸ್ತನ್ಯ ಸಪ್ತಾಹದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.ಕೌಮಾರಭೃತ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪ್ರಸನ್ನ ಕೇಶವ ಬಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಅಲ್ಮಾಸ್ ತರನುಂ ವಂದನಾರ್ಪಿಸಿದರು. ಕೌಮಾರಭೃತ್ಯ ವಿಭಾಗದ ಮುಖ್ಯಸ್ಥರಾದ ಡಾ.ವಿಜಯಲಕ್ಷ್ಮಿ ರೈ ಅವರು ಉಪಸ್ಥಿತರಿದ್ದರು.