ಕಾಪು ಬ್ಲಾಕ್ ಹಾಗೂ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ
ದೇವಸ್ಥಾನ ಸಹಿತ ಪ್ರಾರ್ಥನಾ ಮಂದಿಗಳ ದ್ವಂಸ ವಿರೋಧಿ ಕಾಪು ಬ್ಲಾಕ್ ಕಾಂಗ್ರೆಸ್ ಹಾಗೂ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
ಪಡುಬಿದ್ರಿ ಬೀಡು ಬಳಿಯಿಂದ ಪಡುಬಿದ್ರಿ ಮುಖ್ಯ ಪೇಟೆಯವರಗೆ ನಡೆದ ಬೃಹತ್ ಪಂಜಿನ ಮೆರವಣಿಗೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು. ಬಳಿಕ ಪಡುಬಿದ್ರಿ ಪೇಟೆಯಲ್ಲಿ ಸೇರಿದ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ನ್ಯಾಯವಾದಿ ಎಂ.ಜಿ.ಹೆಗ್ಡೆ, ಧಾರ್ಮಿಕತೆಯ ಹೆಸರಲ್ಲಿ ಹಿಂದುಗಳನ್ನು ವಂಚಿಸಿ ಹಿಂದುಗಳ ಮತ ಪಡೆದು ಗದ್ದುಗೆ ಏರಿದ ರಾಜ್ಯ ಸರ್ಕಾರ ಇದೀಗ ಹಿಂದೂ ದೇವಸ್ಥಾನಗಳನ್ನು ದ್ವಂಸಗೊಳಿಸುವ ಮೂಲಕ ತನ್ನ ನೈಜ್ಯ ಬಣ್ಣ ಅನಾವರಣಗೊಳಿಸಿದೆ. ಜನರು ಇನ್ನಾದರೂ ಬಿಜೆಪಿಯ ನಕಲಿ ಹಿಂದುತ್ವದ ವಿರುದ್ಧ ಸಿಡಿದೇಳುವ ಅಗತ್ಯವಿದೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಯಾವುದೇ ಶಾಸಕ ತನ್ನ ವ್ಯಾಪ್ತಿಯ ಪೆÇಲೀಸ್ ಠಾಣೆಗಳಿಂದ ತಿಂಗಳು ತಿಂಗಳು ಹಣದ ಬೇಡಿಕೆ ಇಟ್ಟರೆ ಆ ಪೆÇಲೀಸ್ ಠಾಣೆಗಳಿಂದ ನಾವು ಎಷ್ಟರ ಮಟ್ಟಿನ ನ್ಯಾಯಬದ್ಧ ಕಾನೂನು ರಕ್ಷಣೆಯನ್ನು ನಿರೀಕ್ಷಿಸಲು ಸಾಧ್ಯ, ಇಂಥಹ ಕೆಟ್ಟ ಬೆಳವಣಿಗೆಯಿಂದಾಗಿ ಶಾಸಕರಿಗೆ ಹಣ ನೀಡಲು ನಿರಾಕರಿಸಿದ ಪಡುಬಿದ್ರಿ ಠಾಣಾ ಎಸ್ಸೈ ಸುಬ್ಬಣ್ಣ ಎಂಬ ದಕ್ಷ ಅಧಿಕಾರಿ ವರ್ಗಾವಣೆ ಎಂಬ ಶಿಕ್ಷೆಗೆ ಗುರಿಯಾಗ ಬೇಕಾಯಿತು ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ. ಶೆಟ್ಟಿ, ದೀಪಕ್ ಕೋಟ್ಯಾನ್ ಇನ್ನಾ, ಕರುಣಾಕರ್ ಪೂಜಾರಿ, ಗಣೇಶ್ ಕೋಟ್ಯಾನ್, ದಿನೇಶ್ ಕೋಟ್ಯಾನ್, ವೈ.ಸುಕುಮಾರ್ ಮುಂತಾದವರಿದ್ದರು.