ಕೃಷಿ ಮಸೂದೆಗಳ ವಾಪಸ್ಸಾತಿಗೆ ಆಗ್ರಹಿಸಿ ಸೆ.27ರಂದು ಬೃಹತ್ ಪ್ರತಿಭಟನಾ ಸಭೆ

ಕೇಂದ್ರ ಸರಕಾರ ತಂದಿರುವ ಕೃಷಿ ಮಸೂದೆಗಳ ವಾಪಸ್ಸಾತಿಗೆ ಆಗ್ರಹಿಸಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ಸಭೆ ಹಾಗೂ ರಾಷ್ಟ್ರೀಯ ಬಂದ್ ಸೆಪ್ಟಂಬರ್ 27ರಂದು ಬಿ.ಸಿ. ರೋಡ್‌ನಲ್ಲಿ ನಡೆಯಲಿದೆ.

ಕೇಂದ್ರ ಸರಕಾರ ತಂದಿರು ಕೃಷಿ ಮಸೂದೆಗಳ ವಾಪಸ್ಸಾತಿಗೆ ಹಾಗೂ ಬೆಳೆಗಳಿಗೆ ಕನಿಷ್ಟ ಬೆಂಬಲಬೆಲೆಯನ್ನು ಕಾನೂನಾತ್ಮಕ ಗೊಳಿಸಲು ಆಗ್ರಹಿಸಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರು ನಿರಂತರ ಹೋರಾಟಕ್ಕೆ ಸೆಪ್ಟೆಂಬರ್ 26ಕ್ಕೆ 10 ತಿಂಗಳು ತುಂಬುತ್ತದೆ.ಈ ನಿಟ್ಟಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚವು ಸೆಪ್ಟೆಂಬರ್ 27 ರಂದು ಭಾರತ್ ಬಂದ್ ಗೆ ಕರೆನೀಡಿದ್ದು ರಾಜ್ಯದಲ್ಲಿ ಸಂಯುಕ್ತ ಹೋರಾಟ ಕರ್ನಾಟಕವೂ ರಾಜ್ಯ ಬಂದ್‌ಗೆ ಕರೆನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತ-ದಲಿತ- ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟವು ಸೆ.15ರಂದು ರಂದು ಬಿ.ಸಿ.ರೋಡಿನ ಸಿಐಟಿಯು ನಲ್ಲಿ ಸಭೆ ಸೇರಿ ವಿಷಯಗಳ ಜೊತೆಗೆ ಕಾರ್ಮಿಕ ಮಸೂದೆಯನ್ನು ಹಿಂಪಡೆಯಲೂ, ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ ವೀರೋಧಿಸಿ ಯು.ಪಿ.ಸಿ.ಎಲ್. ವಿದ್ಯುತ್ ಉತ್ಪಾದನಾ ಘಟಕವೂ ರಚಿಸಲೂ ಉದ್ದೇಶಿಸಿರುವ ಉಡುಪಿ- ಕಾಸರಗೋಡು ವಿದ್ಯುತ್ ಪ್ರಸರಣಾ ಮಾರ್ಗದಿಂದಾಗುವ ದುಶ್ಪಾರಿಣಾಮವನ್ನು ವೀರೋಧಿಸಿ ಮತ್ತು ಪೆಟ್ರೋಲ, ಡೀಸಲ್,ಗ್ಯಾಸ್ ನಬೆಲೆಯೇರಿಕೆಯನ್ನು ಖಂಡಿಸಿ ಸೆಪ್ಟೆಂಬರ್ 27 ರಂದು ಬಿ.ಸಿ.ರೋಡಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಙಟನಾ ಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ನಿರ್ಣಯ ಕೈಗೊಂಡಿದೆ.

ಈ ಸಭೆಯಲ್ಲಿ ಒಕ್ಕೂಟದ ಸಂಯೋಜಕರಾದ ರವಿಕಿರಣ್ ಪುಣಚ, ಕೆ.ಯಾದವಶೆಟ್ಟಿ, ಕರ್ನಾಟಕ ಪ್ರಾಂತರೈತಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣಪ್ಪ ಸಾಲ್ಯಾನ್, ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ, ಜಿಲ್ಲಾ ಉಪಾಧ್ಯಕ್ಷರಾದ ಅಲ್ವೀನ್ ಮಿನೇಜಸ್, ಸುಳ್ಯ ತಾಲಯ ಅಧ್ಯಕ್ಷತಾದ ಲೋಲಾಜಾಕ್ಷ ಗೌಡ ಭೂತಕಲ್ಲು, ಬಂಟ್ವಾಳ ತಾಲೂಕು ಕೋಷಾಧಿಕಾರಿ ಡಿ.ಕೆ.ಶಾಹುಲ್ ಹಮೀದ್, ಸಂಘಟನಾ ಕಾರ್ಯದರ್ಶಿ ಸದಾನಂದ ಶೀತಲ್ ಸಿಐಟಿಯು ನ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ಡಿವೈಎಫ್‌ಐ ಮುಖಂಡರಾದ ತುಳಸಿದಾಸ್ ವಿಟ್ಲ ಕೆಪಿಆರ್‌ಎಸ್‌ನ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಹರಿದಾಸ್ ಭಟ್, ಉಡುಪಿ- ಕಾಸರಗೋಡು 400ಕೆವಿ ವಿದ್ಯುತ್ ಪ್ರಸರಣಾ ಮಾರ್ಗದ ಅತಂಕಿತ ಸಂತ್ರಸ್ಥರ ಹೋರಾಟ ಸಮಿತಿಯ ಅಧ್ಯಕ್ಷರಾದ ರೋಯ್ ಕಾರ್ಲೋ, ಕಾರ್ಯದರ್ಶಿ ಬೆನಿಡಿಕ್ಟ್ ಕಾರ್ಲೋ, ರೈತ ಯುವ ಮುಖಂಡರಾದ ಸುರೇಂದ್ರ ಕೋರ್ಯ ಹಾಗೂ ಮಂಜುನಾಥ ಗೌಡ ಮಡ್ತಿಲ ಹಾಗೂ ಇತರರೂ ಹಾಜರಿದ್ದರು.

Related Posts

Leave a Reply

Your email address will not be published.