ಕೋಡಿಕಲ್‍ ನಾಗದೇವರ ಕಲ್ಲಿಗೆ ದುಷ್ಕರ್ಮಿಗಳಿಂದ ಹಾನಿ ಪ್ರಕರಣ : ಕೋಡಿಕಲ್ ಬಂದ್

ನಗರದ ಕೋಡಿಕಲ್‍ನಲ್ಲಿರುವ ನಾಗನಕಟ್ಟೆಯ ನಾಗಬಿಂಬ ಎಸೆದು ದುಷ್ಕೃತ್ಯ ಎಸೆದ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಇಂದು ಕೋಡಿಕಲ್ ಪ್ರದೇಶದಲ್ಲಿ ಸಂಪೂರ್ಣ ಬಂದ್‍ಗೆ ಕರೆ ನೀಡಿದ್ದು, ಅದರಂತೆ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರತವಾಗಿ ಬಂದ್ ಮಾಡಿದ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೋಡಿಕಲ್‍ನಲ್ಲಿ ವಿಶ್ವಹಿಂದೂಪರಿಷತ್ ಹಾಗೂ ಸ್ಥಳೀಯ ಸಾರ್ವಜನಿಕರು ಬಂದ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.

ಮೆಡಿಕಲ್‍ಶಾಪ್‍ಗಳು, ಚಿಕ್ಕನ್, ಮಟನ್, ಅಂಗಡಿ, ತರಕಾರಿ, ಹಣ್ಣುಹಂಪಲು ಅಂಗಡಿ, ದಿನಸಿ ಅಂಗಡಿಗಳ ಸಹಿತ ಬಹುತೇಕರು ಸ್ವಯಂಪ್ರೇರಿತರಾಗಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗು ಪೆÇಲೀಸ್‍ಕ್ರಮ ಕೈ ಗೊಳ್ಳಲಾಗಿದೆ.

Related Posts

Leave a Reply

Your email address will not be published.