ಖಾದಿ ಬಟ್ಟೆ ಖರೀದಿ ಮೂಲಕ ಬಿಜೆಪಿ ವತಿಯಿಂದ ಗಾಂಧೀಜಿ ಜಯಂತಿ ಆಚರಣೆ
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಹಾತ್ಮ ಗಾಂಧೀಜಿಯವರ ಜಯಂತಿ ಪ್ರಯುಕ್ತ ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಖಾದಿ ಗ್ರಾಮೋದ್ಯೋಗ ಮಳಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಅವರು, ಖಾದಿ ಬಟ್ಟೆಯನ್ನು ಖರೀದಿ ಮೂಲಕ ಗಾಂಧಿ ಜಯಂತಿಯನ್ನ ಆಚರಣೆ ಮಾಡಲಾಯ್ತು,
ಈ ಸಂದರ್ಭದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು, ಸ್ವದೇಶಿ ಚಿಂತನೆಯ ಅವಶ್ಯಕತೆ ಇದೆ ಎಂಬುವುದನ್ನು ಮನಗಂಡು ವಿದೇಶಿ ವಸ್ತುಗಳನ್ನು ಬಹಿಷ್ಕಾರ ಮಾಡಿದ್ದರು. ಜನರಲ್ಲಿ ಸ್ವದೇಶಿ ಚಿಂತೆಯ ಭಾವನೆ, ಖಾದಿ ಕಲ್ಪನೆಗಳನ್ನು ಕೊಟ್ಟವರು ಮಹಾತ್ಮಾ ಗಾಂಧೀಜಿಯವರು ಎಂದು ಅವರು ಹೇಳಿದರು. ಈ ವೇಳೆ ಶಾಸಕ ಡಿ.ವೇದವ್ಯಾಸ್ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಸೇರಿದಂತೆ ಮತ್ತಿತರರು ಉಪಸ್ಥತಿರದ್ದರು.