ಖಾನ್‍ಗಳು ದೇಶ ಬಿಟ್ಟು ನೇರವಾಗಿ ಅಪಘಾನಿಸ್ಥಾನಕ್ಕೆ ಹೋಗಲಿ : ಬಸನಗೌಡ ಪಾಟೀಲ ಯತ್ನಾಳ್
ಬಾಲಿವುಡ್ ಖಾನ್‍ಗಳ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಹೇಳಿಕೆ ನೀಡಿರುವ ಯತ್ನಾಳ ಶಾರುಖಾನ್ ಪುತ್ರ ಡ್ರಗ್ಸ್ ಕೇಸ್ ಲ್ಲಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ ದೇಶ ಸುರಕ್ಷಿತ ಅಲ್ಲ ಎಂದ ಖಾನ್ ಗಳು ದೇಶ ಬಿಡಲಿ ಎಂದರು. ಆ ಮಕ್ಕಳೆಲ್ಲ ನೇರವಾಗಿ ಅಪಘಾನಿಸ್ತಾನಕ್ಕೆ ಹೋಗಲಿ, ಅಲ್ಲಿಯೇ ಸುರಕ್ಷಿತವಾಗಿ ತಾಲಿಬಾನ್ ಕೆಳಗೆ ನಟನೆ ಮಾಡಿಕೊಂಡಲು ಇರಲಿ ಎಂದು ವ್ಯಂಗವಾಡಿದ್ದಾರೆ.