ಗುರುದೇವ್ ಆಂಡ್ ಜಿ.ಡಿ. ಗ್ರೂಪ್‌ನ ಜಾಹೀರಾತು ಸಂಸ್ಥೆಯ ನೂತನ ಶಾಖೆ ಆರಂಭ

ಮಂಗಳೂರಿನ ಪ್ರಸಿದ್ಧ ಗುರುದೇವ್ ಆಂಡ್ ಜಿ.ಡಿ. ಗ್ರೂಪ್‌ನ ಜಾಹೀರಾತು ಸಂಸ್ಥೆಯ ನೂತನ ಶಾಖೆಯು ಉಡುಪಿಯ ತೆಂಕಪೇಟೆಯಲ್ಲಿರುವ ಹೆಡ್‌ಪೋಸ್ಟ್ ಆಫೀಸಿನ ಮುಂಭಾಗದಲ್ಲಿರುವ ಶ್ರೀರಾಮ್ ಆರ್ಕೇಡ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತ್ತು.

ನೂತನ ಶಾಖೆಯ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರ ಶಾಸಕರಾದರಘುಪತಿ ಭಟ್, ಇವರು ನೇರವೇರಿಸಿದರು. ದೀಪ ಪ್ರಜ್ವಲನ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ಇವರು ನೇರವೇರಿಸಲಿರುವರು. ಉಡುಪಿ ಪುರಸಭೆ ಅಧ್ಯಕ್ಷರಾದ ಸುಮಿತ್ರಾ ನಾಯಕ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ರು. ಗ್ರಾಹಕರು ಯಾವುದೇ ರೀತಿಯ ಜಾಹೀರಾತು ಫಲಕಗಳನ್ನು ಅಳವಡಿಸಲು, ಯಾವುದೇ ದಿನಪತ್ರಿಕೆಗಳಿಗೆ ಜಾಹೀರಾತು ನೀಡಲು ಹಾಗೂ ಡಿಸೈನಿಂಗ್‌ಗಾಗಿ ನಮ್ಮ ಸಂಸ್ಥೆಯನ್ನು ಸಂಪರ್ಕಿಸಬಹುದು. ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದು ನಮ್ಮ ಆದ್ಯತೆ ಎಂದು ಸಂಸ್ಥೆಯ ನಿರ್ದೇಶಕರಾದ ರೋಶನ್ ಬಾಳಿಗ ಹಾಗೂ ರಾಜೇಶ್ ಬಾಳಿಗ ತಿಳಿಸಿದ್ದಾರೆ.

ಬಂಟ್ವಾಳ ದಿ| ದಾಮೋದರ ಬಾಳಿಗ ಅವರು ತನ್ನ ಸಹೋದರರೊಂದಿಗೆ 1973ರಲ್ಲಿ ಮಂಗಳೂರಿನಲ್ಲಿ ಗುರುದೇವ್ ಮತ್ತು ಜಿಡಿ ಗ್ರೂಪ್ ಆರಂಭಿಸಿ ಜಾಹೀರಾತು, ಪ್ಯಾಕೇಜಿಂಗ್, ಕೈಗಾರಿಕೆ ಹಾಗೂ ಹಾಸ್ಪಿಟಾಲಿಟಿ ಸೇರಿದಂತೆ ವಿವಿಧ ವಲಯಗಳಲ್ಲಿ ಛಾಪು ಮೂಡಿಸಿದ್ದರು. ದೇಶದ ಬೇರೆ ಬೇರೆ ಕಡೆಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯು ಉಡುಪಿಯಲ್ಲಿ ತಮ್ಮ ಜಾಹೀರಾತು ಶಾಖೆಯನ್ನು ಆರಂಭಿಸಿದೆ.

Related Posts

Leave a Reply

Your email address will not be published.