ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶಕ್ಕೆ ನಿಧಿ ಸಂಚಯನ

ಸುರತ್ಕಲ್: ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಚಿತ್ರಾಪುರ ಮಠದ ಸಮಗ್ರ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಡೆಸುವ ಸಂಕಲ್ಪದಂತೆ ನಿಧಿ ಸಂಚಯನ ಕಾರ್ಯಕ್ರಮವು ಜರಗಿತು.

ಪೇಜಾವರ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಾ ಭರತ್ ಶೆಟ್ಟಿ ವೈ ಅವರು ನಿಧಿ ಸಂಚಯನಕ್ಕೆ ಮುಷ್ಠಿ ಕಾಣಿಕೆ ಸಮರ್ಪಿಸುವ ಮೂಲಕ ಶುಭಾರಂಭಗೊಳಿಸಿದರು. ಈ ಸಂದರ್ಭ ಆಶೀರ್ವಚನ ನೀಡಿದ ಪೇಜಾವರ ಶ್ರೀಗಳು ದೇವಾಲಯಗಳು ಹಿಂದೂಗಳ ಶ್ರದ್ಧಾ ಕೇಂದ್ರವಾಗಿದೆ. ದೇವರು ಎಲ್ಲಡೆ ಇದ್ದರೂ ಭಗವಂತನ ಸಂಪರ್ಕವನ್ನು, ಪ್ರಾರ್ಥನೆ ನೆರವೇರಿಸಲು ದೇವಾಲಯಗಳ ಮೂಲಕ ಸಾಧ್ಯ. ಇದೀಗ ಚಿತ್ರಾಪುರ ದೇವಸ್ಥಾನವನ್ನು ಊರವರ, ಭಕ್ತರ ಮುಂದಾಳತ್ವದಲ್ಲಿ ಜೀರ್ಣೋದ್ಧಾರಗೊಳಿಸಲು ಸಂಕಲ್ಪಿಸಿದ್ದು ದೇವರು ಶಕ್ತಿ, ಸಾಮರ್ಥ್ಯವನ್ನು ‘ಭಕ್ತಾಗಳಿಗೆ ನೀಡಿ ಹರಸಲಿ ಎಂದು ಹೇಳಿದರು.

ಭಕ್ತಾಗಳು, ಊರ ಪರವೂರ ಉದ್ಯಮಿಗಳು ನಿಧಿ ಸಂಚಯನಕ್ಕೆ ಅನುಕೂಲ ಸಂದರ್ಭದಲ್ಲಿ ಆಗಮಿಸಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ತಮ್ಮಿಂದಾದ ಹೆಚ್ಚಿನ ಸಹಕಾರ ನೀಡಬಹುದಾಗಿದೆ ಎಂದು ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಉಮೇಶ್ ಟಿ. ಕರ್ಕೇರಾ ಮನವಿ ಮಾಡಿದರು. ಈ ಸಂದರ್ಭ ಕೇಶವ ಸಾಲ್ಯಾನ್, ಸ್ಥಳೀಯ ಪಾಲಿಕೆಯ ಸದಸ್ಯರುಗಳು, ಸಮಿತಿ ಪದಾಕಾರಿಗಳು, ಸರ್ವ ಸದಸ್ಯರು, ಊರಿನ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published.