ಜಕ್ರಿಬೆಟ್ಟು ಹೊಸ್ಮಾರ್ ಪೈಪ್‌ಲೈನ್ ಕಾಮಗಾರಿ: ಕೆಲಸ ಪೂರ್ಣಗೊಳಿಸಲು ಮುಂದಾದ ಸಂಸ್ಥೆ
ಬಂಟ್ವಾಳ: ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿಯಿಂದ ಜಕ್ರಿಬೆಟ್ಟುವರೆಗೆ ಎಂಆರ್‌ಪಿಎಲ್ ಸಂಸ್ಥೆಗೆ ನೀರು ಸರಬರಾಜಾಗುವ ಪೈಪ್‌ಲೈನ್ ಸ್ಥಳಾಂತರ ಕಾಮಗಾರಿ ವೇಳೆ ನಡೆದಿದ್ದ ಅಪೂರ್ಣ ಕೆಲಸವನ್ನು ಸಂಸ್ಥೆ ಪೂರ್ಣಗೊಳಿಸಲು ಮುಂದಾಗಿದೆ. ಕಳೆದ ಮೂರು ದಿನದ ಹಿಂದೆ ಈ ಸಮಸ್ಯೆಯ ಬಗ್ಗೆ ವಿ೪ ನ್ಯೂಸ್‌ನಲ್ಲಿ ಸಮಗ್ರ ವರದಿಯನ್ನು ಬಿತ್ತರಿಲಾಗಿತ್ತು.
ಜಕ್ರಿಬೆಟ್ಟು ಹೊಸ್ಮಾರ್ ಎಂಬಲ್ಲಿ ರಸ್ತೆ ಬದಿ ಪೈಪ್ ಅಳವಡಿಕೆಗಾಗಿ ತೋಡಲಾಗಿದ್ದ ದೊಡ್ಡ ಹೊಂಡಕ್ಕೆ ಮಣ್ಣು ಹಾಕಿ ಮುಚ್ಚಲಾಗಿದೆ. ಇಲ್ಲಿನ ರಸ್ತೆ ಪಕ್ಕದ ಮನೆಗಳ ಮುಂಭಾಗವೇ ಪೈಪ್‌ಲೈನ್ ಹಾದುಹೋಗಿದ್ದು ಕ್ರಾಂಕ್ರೀಟ್ ಸ್ಲಾಬ್ ನಿರ್ಮಿಸಲಾಗುತ್ತಿದೆ. ಮನೆಗಳ ಸಂಪರ್ಕ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಒಟ್ಟುನಲ್ಲಿ ಹಲವು ದಿನಗಳಿಂದ ಇಲ್ಲಿನ ಜನರು ಅನುಭವಿಸುತ್ತಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಎಂಆರ್‌ಪಿಎಲ್‌ನ ಅಪೂರ್ಣ ಪೈಪ್‌ಲೈನ್ ಕಾಮಗಾರಿಯಿಂದಾಗಿ ಅಲ್ಲಲಿ ದೊಡ್ಡ ಹೊಂಡಗಳನ್ನು ತೋಡಿ ಮುಚ್ಚದೆ ಬಿಟ್ಟು ಅಪಾಯಕ್ಕೆ ಆಹ್ವಾನ ನೀಡುವಂತಿತ್ತು. ಕಾಂಕ್ರೀಟ್ ರಸ್ತೆಗಳನ್ನು ತುಂಡರಿಸಿ ಪೈಪ್‌ಲೈನ್ ಹಾಕಿದ ಬಳಿಕ ರಸ್ತೆ ಪುನರ್ ನಿರ್ಮಿಸಿಕೊಡದೆ ಅರ್ಧದಲ್ಲೇ ಬಿಡಲಾಗಿತ್ತು. ಹೊಸ್ಮಾರ್ ಎಂಬಲ್ಲಿ ಪೈಪ್ ಅಳವಡಿಕೆಗಾಗಿ ದೊಡ್ಡ ಹೊಂಡ ತೋಡಿ ಮಣ್ಣು ತುಂಬದೇ ಬಿಡಲಾಗಿತ್ತು. ಇತ್ತೀಚೆಗೆ ನಾಯಿಯೊಂದು ಹೊಂಡದಲ್ಲಿ ಸತ್ತು ಬಿದ್ದು ತೆಗೆಯಲು ಸಾಧ್ಯವಾಗದೇ ದುರ್ವಾಸನೆ ಬೀರುತ್ತಿತ್ತು ಈ ಅವೈಜ್ಞಾನಿಕತೆಯ ವಿರುದ್ದ ವಿ೪ ನ್ಯೂಸ್‌ವಿಸೇಷ ವರದಿ ಪ್ರಕಟಿಸಿ ಸಂಬಂಧಪಟ್ಟ ಸಂಸ್ಥೆಯನ್ನು ಎಚ್ಚರಿಸುವ ಪ್ರಯತ್ನ ನಡೆಸಿತ್ತು. ಇದೀಗ ಸ್ಥಳೀಯ ಮನೆಗಳಿಗೆ ಸಂಪರ್ಕಿಸುವ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದು ಹೊಂಡಕ್ಕೆ ಮಣ್ಣು ತುಂಬಲಾಗಿದೆ.