ಟೋಕಿಯೋ ಒಲಿಂಪಿಕ್ಸ್: ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ಗೆ ಕಂಚಿನ ಪದಕ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ವೆಲ್ಟರ್ ವೇಟ್ (69ಕೆಜಿ)ವಿಭಾಗದ ಸೆಮಿ ಫೈನಲ್ ನಲ್ಲಿ ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಸೋಲನುಭವಿಸಿದರು. ಈ ಮೂಲಕ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಬುಧವಾರ ಟೋಕಿಯೊ ಒಲಿಂಪಿಕ್ಸ್ ನ ವನಿತೆಯರ 69 ಕೆಜಿ ವಿಭಾಗದಲ್ಲಿ ಬಾಕ್ಸರ್ ಲವ್ಲಿನಾ ಅವರು ತಮ್ಮ ಎದುರಾಳಿ ವಿಶ್ವಚಾಂಪಿಯನ್ ಟರ್ಕಿಯ ಬುಸೆನಾ ಸುರ್ಮೆನೆಲಿ ವಿರುದ್ಧ ಪರಾಜಯಗೊಳ್ಳುವ ಮೂಲಕ ಚಿನ್ನದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದಂತಾಗಿದೆ. 69ಕೆಜಿ ಬಾಕ್ಸಿಂಗ್ ಪಂದ್ಯದ ಮೊದಲ ಸುತ್ತಿನಲ್ಲಿ ಲವ್ಲಿನಾ ಅದ್ಭುತ ಪ್ರದರ್ಶನ ನೀಡಿದ್ದರು.ಆದರೆ ಮೊದಲ ಸುತ್ತಿನ ಕೊನೆಯ 30 ಸೆಕೆಂಡುಗಳಲ್ಲಿ ಸುರ್ಮನೆಲಿ ಲವ್ಲಿನಾಗೆ ಬಲವಾದ ಪಂಚ್ ನೀಡಿದ್ದರು. ಬಳಿಕ ಕೊನೆಯ 30ಸೆಕೆಂಡುಗಳಲ್ಲಿ ಎದುರಾಳಿಗೆ ಪ್ರಬಲ ಪಂಚ್ ನೀಡಲು ರೆಫ್ರಿ ಎಚ್ಚರಿಕೆ ನೀಡಿದರೂ ಕೂಡಾ ಅದಕ್ಕೆ ವಿಫಲರಾದ ಹಿನ್ನೆಲೆ ಸುರ್ಮೆನೆಲಿ ಮೊದಲ ಶ್ರೇಣಿಯಲ್ಲಿ ಜಯಿಸಿರುವುದಾಗಿ ತೀರ್ಪುಗಾರರು ಘೋಷಿಸಿದ್ದರು.
ಒಲಿಂಪಿಕ್ ನಲ್ಲಿ ಬಾಕ್ಸರ್ ಎಂಸಿ ಮೇರಿ ಕೋಮ್ ನಂತರ ಕಂಚಿನ ಪದಕ ಗೆದ್ದ ಹೆಮ್ಮೆ ಎರಡನೇ ಮಹಿಳಾ ಬಾಕ್ಸರ್ ಲವ್ಲೀನಾ ಅವರದ್ದಾಗಿದೆ. ಬಾಕ್ಸರ್ ಮೇರಿ ಕೋಮ್ ಅವರು 2012ರಲ್ಲಿ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು.