ಟೋಕಿಯೋ ಪ್ಯಾರಾಲಿಂಪಿಕ್ಸ್ : ಬೆಳ್ಳಿ ಪದಕ ಗೆದ್ದ ಕನ್ನಡಿಗ ಸುಹಾಸ್
ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಲ್ 4 ಫೈನಲ್ ನಲ್ಲಿ ಅಗ್ರ ಶ್ರೇಯಾಂಕದ ಫ್ರಾನ್ಸ್ ಆಟಗಾರ ಲುಕಾಸ್ ಮಝೂರ್ ಅವರ ವಿರುದ್ಧ ತೀವ್ರ ಹೋರಾಟ ನೀಡಿದ ಹೊರತಾಗಿಯೂ 1-2 (21-15, 17-21, 15-21) ಅಂತರದಿಂದ ಸೋತಿರುವ ಭಾರತದ ಐಎಎಸ್ ಅಧಿಕಾರಿ ಹಾಗೂ ನೊಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿ ಪದಕವನ್ನು ಗೆದ್ದುಕೊಂಡು ಹೊಸ ಇತಿಹಾಸ ನಿರ್ಮಿಸಿದರು.
ಸುಹಾಸ್ ಇವರು ಕರ್ನಾಟಕ ಮೂಲದ ಐಎಎಸ್ ಅಧಿಕಾರಿ. ಪುರುಷರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸುಹಾಸ್ ಯತಿರಾಜ್ ಬೆಳ್ಳಿ ಗೆದ್ದಿದ್ದಾರೆ. ಇನ್ನು ಫ್ಯಾನ್ಸ್ ನ ಲುಕಾಸ್ ಮಝೂರ್ ವಿರುದ್ಧ ಫೈನಲ್ ನಲ್ಲಿ ಸೋಲನ್ನು ಸ್ವೀಕರಿಸಿದ್ದಾರೆ.ಬ್ಯಾಡ್ಮಿಂಟನ್ ಎಸ್ಎಲ್4 ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ಭಾರತದ, ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ. ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್ನ ಲೂಕಸ್ ಮಜೂರ್ ವಿರುದ್ಧ ವಿಶ್ವದ ನಂಬರ್ 3 ಆಟಗಾರ ಸುಹಾಸ್ 1-2 ಸೆಟ್ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದ್ದಾರೆ.
ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಸುಹಾಸ್ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆದ್ದಿದ್ದರು. ಇನ್ನು ಸುಹಾಸ್ ಹಾಸನದಲ್ಲಿ ಜನಿಸಿದ್ದು, ಇಂಜಿನಿಯರ್ ಪದವಿಯನ್ನು ಪಡೆದಿದ್ದಾರೆ. ಅಲ್ಲದೆ ಈ ಹಿಂದೆ ಪ್ರಯಾಗರಾಜ್, ಆಗ್ರಾ, ಅಝಮ್ಗಡ, ಜೌನ್ಪುರ, ಸೋನ್ಭದ್ರಾ ಜಿಲ್ಲೆಗಳ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದಾರೆ.