ಡೌನ್ಲೋಡ್‌ ಜೊತೆಗೆ ಅಪ್ಲೋಡ್ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ : ಡಾ. ವಿಶ್ವನಾಥ ಬದಿನಾಕ

ಉಜಿರೆ: “ಆಧುನಿಕ ತಂತ್ರಜ್ಞಾನಗಳು ಮುಂಚೂಣಿಯಲ್ಲಿದೆ. ಈಗ ನಾವು ಪುಸ್ತಕಗಳಿಗಾಗಿ ಪರದಾಡುವಂತಿಲ್ಲ, ಡಿಜಿಟಲ್ ಗ್ರಂಥಾಲಯಗಳು ನಮ್ಮ ಬಳಿಯೇ ಲಭ್ಯವಿವೆ. ಹಾಗಾಗಿ ಜ್ಞಾನ ಪ್ರಸರಣೆಅನ್ನುವುದು ಸುಲಭವಾಗಿದೆ. ನಾವು ನಮ್ಮಕನ್ನಡ ಷ್ಣ ಪ್ರಪಂಚದಜ್ಞಾನಕ್ಕೆ ಪಸರಿಸಬೇಕು”.ಎಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಕನ್ನಡ ಪ್ರಾಧ್ಯಾಪಕರಾದಡಾ. ವಿಶ್ವನಾಥ ಬದಿನಾಕ ಅಭಿಪ್ರಾಯಪಟ್ಟರು.

ಇವರುಉಜಿರೆಯ ಶ್ರೀ ಧ.ಮಂ. ಪದವಿ ಕಾಲೇಜಿನಕನ್ನಡ ವಿಭಾಗ ಹಾಗೂ ಪತ್ರಿಕೋದ್ಯಮ ವಿಭಾಗದ ಸಹ ಭಾಗಿತ್ವದಲ್ಲಿ ನಡೆದ “ಕನ್ನಡವನ್ನುತಂತ್ರಜ್ಞಾನದೊಂದಿಗೆ ಬಳಸುವುದು ಹೇಗೆ? ” ಎಂಬ ಅತಿಥಿಉಪನ್ಯಾಸಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
“ಕಾಲ ಬದಲಾದ ಹಾಗೆ ಮಾಹಿತಿಗಳ ಸ್ವೀಕಾರವು ಬದಲಾಗುತ್ತಿದೆ. ನಾವುಗಳು ಡೌನ್ಲೋಡ್ ಸಂಸ್ಕೃತಿಯ ಬದಲುಅಪ್ಲೋಡ್ ಸಂಸ್ಕೃತಿಯನ್ನು ಬೆಳೆಸಿಕೊಳ್ಳೋಣ” ಎಂದುಅವರು ನುಡಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಕಾಸರಗೋಡು ಸರ್ಕಾರಿಕಾಲೇಜಿನ ಪ್ರಾಧ್ಯಾಪಕಡಾ. ರಾಧಾಕೃಷ್ಣ ಬೆಳ್ಳೂರ್ ಮಾತನಾಡಿ, ಕನ್ನಡ ಲಿಪಿಯ ಕೆಲವೊಂದುಕುತೂಹಲಕಾರಿ ವಿ?ಯಗಳನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥಡಾ. ಭಾಸ್ಕರ ಹೆಗ್ಡೆ ಉಪಸ್ಥಿತರಿದ್ದರು. ಜೊತೆಗೆ ವಿಭಾಗದಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾಲೇಜಿನಕನ್ನಡ ಪ್ರಾಧ್ಯಾಪಕರವಿಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿಸಿದರು.ಡಾ. ಬಿ.ಪಿ ಸಂಪತ್‌ಕುಮಾರ್ ವಂದಿಸಿದರು.
ವರದಿ: ಅರವಿಂದ

 

Related Posts

Leave a Reply

Your email address will not be published.