ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ರೆಡ್‍ಕ್ರಾಸ್ ಸಂಸ್ಥೆಯ ಸಹಕಾರದೊಂದಿಗೆ ಕೋವಿಡ್ ಲಸಿಕಾ ಕಾರ್ಯಕ್ರಮ

ಬೈಕಂಪಾಡಿ ಮಹಿಳಾ ಸಮಾಜದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ರೆಡ್‍ಕ್ರಾಸ್ ಸಂಸ್ಥೆಯ ಸಹಕಾರದೊಂದಿಗೆ ಇಂದಿರಾ ಮಾಧವ ವಿದ್ಯಾರ್ಥಿ ಭವನದಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮ ನಡೆಯುತ್ತಿದೆ.ಬೈಕಂಪಾಡಿಯ ಎಲ್ಲಾ ವಯೋ ಮಾನದ ಜನರಿಗೆ ಮತ್ತು ಮುಖ್ಯವಾಗಿ ಮೀನುಗಾರಿಕಾ ವೃತ್ತಿಯವರಿಗೆ ಲಸಿಕೆಯನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬೈಕಂಪಾಡಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನವೀನ್ ಸಾಲ್ಯಾನ್ ಅವರು ಮಾತನಾಡಿ, ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಲಸಿಕೆ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಜಿಲ್ಲಾಡಳಿತ ಇನ್ನೂ ಎರಡು ದಿವಸ ಲಸಿಕೆ ಕಾರ್ಯಕ್ರಮವನ್ನು ವಿಸ್ತರಿಸಿದೆ. ಜಿಲ್ಲೆಯಲ್ಲಿ ಎಲ್ಲರಿಗೂ ಲಸಿಕೆ ಸಿಗಲು ಇಂತಹ ಶಿಬಿರಗಳನ್ನು ಆಯೋಜನೆ ಮಾಡುವ ಅಗತ್ಯವಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಅಧ್ಯಕ್ಷರು ಓಂದಾಸ್, ಸುಮಿತ್ರಾ ಕರಿಯ, ಯತೀಶ್ ಬೈಕಂಪಾಡಿ, ಯತೀಶ್ ಕರ್ಕೇರ, ಶಬರೀಶ್ ಸಾಲ್ಯಾನ್, ಅಭಿಷೇಕ್, ಪ್ರೀತಮ್ ಪುತ್ರನ್, ವರುಣ್ ಸಾಲ್ಯಾನ್, ಲೋಕೇಶ್ ಪುತ್ರನ್, ರಿತೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.