ಪಚ್ಚನಾಡಿ ತ್ಯಾಜ್ಯ ಕುಸಿತ ಪುನರಾರ್ವತನೆಯಾಗದಂತೆ ನಿರ್ಣಯ :ಪಾಲನಾ ಸಭೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ

ಮುಂಗಾರು ಮಳೆಯ ಅವಧಿಯಲ್ಲಿ ಪಚ್ಚನಾಡಿಯ ಘನತ್ಯಾಜ್ಯ ಲ್ಯಾಂಡ್ ಫೀಲ್ ಘಟಕದ ತ್ಯಾಜ್ಯ ಕುಸಿತ ದುರಂತ ಈ ಬಾರಿ ಪುನರಾವರ್ತನೆಗೊಳ್ಳದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕಳೆದ ವಾರ ಈಗಾಗಲೇ ಸಭೆ ನಡೆದಿದ್ದು, ಆ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪಾಲನೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಿತು.

ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಆ ಭಾಗದ ಪಾಲಿಕೆ ಸದಸ್ಯೆ ಸಂಗೀತಾ ಆರ್ ನಾಯಕ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಯಿತು. 

Related Posts

Leave a Reply

Your email address will not be published.