ಪಡುಬಿದ್ರಿ: ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ವರ್ಷಾಚರಣೆ
ಬಿಲ್ಲವರ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ವರ್ಷಾಚರಣೆಯನ್ನು ಬಹಳ ವಿಜ್ರಂಬಣೆಯಿಂದ ಆಚರಿಸಲಾಯಿತು.ಈ ಬಾರಿ ನಾರಾಯಣ ಗುರುಗಳ ಮೂರ್ತಿಯನ್ನು ಪಾದೆಬೆಟ್ಟು ಧೂಮಾವತಿ ದೈವಸ್ಥಾನದಿಂದ ಶೋಭಾಯಾತ್ರೆಯ ಮೂಲಕ ಹೆದ್ದಾರಿ ಕನ್ನಾಂಗಾರು ಬ್ರಹ್ಮ ಬೈದರ್ಕಳ ಗರೋಡಿಯವರಗೆ ಸಾಗಿ ಅಲ್ಲಿಂದ ಬಿಲ್ಲವರ ಸಂಘದ ಬಳಿಯ ನಾರಾಯಣ ಗುರು ಮಂದಿರಕ್ಕೆ ಬರಲಿದೆ.
ಶೋಭಾಯಾತ್ರೆಯಲ್ಲಿ ಕುಣಿತ ಭಜನೆ ಕೊಂಬು ವಾದ್ಯಘೋಷ ವಿಶೇಷವಾಗಿದ್ದು.ಆ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಭಾಗವಹಿಸಲಿದ್ದು ಅರ್ಹ ವಿದ್ಯಾರ್ಥಿಗಳಿಗೆ ಸಂಘದ ಮೂಲಕ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಿದ್ದಾರೆ ಎಂಬುದಾಗಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಹೇಳಿದ್ದಾರೆ.ಈ ಸಂದರ್ಭ ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರವಿ ಶೆಟ್ಟಿ, ಅಶೋಕ್ ಪೂಜಾರಿ, ಸಂದೇಶ್ ಶೆಟ್ಟಿ, ನೀತಾ ಗುರುರಾಜ್, ಸೀನ ಪೂಜಾರಿ ಮುಂತಾದವರಿದ್ದರು.