ಪಡುಬಿದ್ರಿ ಮಹಾಲಿಂಗೇಶ್ವರನಿಗೆ ದೀಪೋತ್ಸವ ಸಂಭ್ರಮ

ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕ ದೀಪೋತ್ಸವ ಸಹಸ್ರಾರು ಭಕ್ತಾದಿಗಳ ಕೂಡುವಿಕೆಯಿಂದ ಬಹಳ ಅದ್ಧೂರಿಯಾಗಿ ನಡೆದು ಸಮಾಪನ ಗೊಂಡಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆದ ಈ ದೀಪೋತ್ಸವದಲ್ಲಿ ಗ್ರಾಮ ಹಾಗೂ ಸ್ಥಳೀಯ ಗ್ರಾಮಗಳಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿ ಸ್ವಯಂ ಪ್ರೇರಿತರಾಗಿ ಎಣ್ಣೆದೀಪ ಉರಿಸುವ ಮೂಲಕ ದೀಪೋತ್ಸವದಲ್ಲಿ ತಮ್ಮ ಅಳಿಲ ಸೇವೆ ಪೂರೈಸಿದ್ದಾರೆ. ಈ ಸಂದರ್ಭ ದೇವಳವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ವಿವಿಧ ಬಗೆಯ ಸುಡುಮದ್ದುಗಳು ಆಗಮಿಸಿದ ಭಕ್ತಾದಿಗಳ ಮನ ತಣಿಸಿದೆ. ಈ ಬಗ್ಗೆ ಮಾತನಾಡಿದ ದೇವಳದ ಕಾರ್ಯನಿರ್ವಾಹನಾಧಿಕಾರಿ ಪ್ರಶಾಂತ್ ಶೆಟ್ಟಿ, ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಈ ಧಾರ್ಮಿಕ ದೀಪೋತ್ಸವ ಭಕ್ತಾದಿಗಳ ಸೇರುವಿಕೆಯಿಂದ ಬಹಳ ಅದ್ಧೂರಿಯಾಗಿ ನಡೆದಿದೆ , ಮಧ್ಯಾಹ್ನ ಸೇರಿದ ಒಂದಿಷ್ಟು ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಿಸಲಾಗಿದ್ದು ರಾತ್ರಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬಲಿ ಸೇವೆ ನಡೆದು ಮಹಾ ಪೂಜೆಯೊಂದಿಗೆ ಈ ವರ್ಷದ ದೀಪೋತ್ಸವ ಕಾರ್ಯಕ್ರಮ ಅಂತ್ಯ ಕಂಡಿದೆ ಎಂದರು.
ಈ ಸಂದರ್ಭ ಗ್ರಾಮದ ಹತ್ತಾರು ಮಂದಿ ಪ್ರಮುಖರು ಸಹಿತ ಸಹಸ್ರಾರು ಭಕ್ತಾಧಿಗಳು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂದ್ದರು.

Related Posts

Leave a Reply

Your email address will not be published.