ಪಾಲಿಕೆಯ ಘನ ತ್ಯಾಜ್ಯ ನಿರ್ವಹಣೆಯ ಪ್ರಸ್ತಾವನೆಗೆ ಖಂಡನೆ

ಮಂಗಳೂರು ದಕ್ಷಿಣದ ಮಾಜಿ ಶಾಸಕರಾದ ಜೆ. ಆರ್. ಲೋಬೊ, ಪಾಲಿಕೆಯ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಇಂದು ನಗರದ ಸ್ವಚ್ಛತೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಬಹಳಷ್ಟು ಅನುಭವ ಇರುವ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜಿತಾಕಮನಂದಜಿ ಹಾಗೂ ಶ್ರೀ ಏಕಗಮ್ಯನಂದ ಸ್ವಾಮೀಜಿ ಯವರನ್ನು ಭೇಟಿ ಮಾಡಿ ಅವರೊಡನೆ ಸಮಾಲೋಚನೆ ನಡೆಸಿದರು.

ಮಂಗಳೂರು ಮಹಾನಗರ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಮಾಲೋಚನೆ ನಡೆಸಿ ಅವರ ಅನುಭವವನ್ನು ಪಡೆದು, ಕಡಿಮೆ ಖರ್ಚಿನಲ್ಲಿ, ಜನರಿಗೆ ಅನುಕೂಲವಾಗುವ ಘನ ತ್ಯಾಜ್ಯ ನಿರ್ವಹಣೆಯ ಪ್ರಸ್ತಾವನೆಯನ್ನು ಪಾಲಿಕೆಗೆ ಸಲ್ಲಿಸುವಂತೆ ಕೋರಿದರು ಹಾಗೂ ಈ ಬಗ್ಗೆ ತಮ್ಮ ಸಂಪೂರ್ಣವಾದ ಬೆಂಬಲವನ್ನು ರಾಮಕೃಷ್ಣ ಮಠದ ಸ್ವಾಮಿ ಜಿತಾಕಮನಂದಜಿ ಹಾಗೂ ಶ್ರೀ ಏಕಗಮ್ಯನಂದ ಸ್ವಾಮೀಜಿ ಸೂಚಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಜೆ.ಆರ್. ಲೋಬೋ ಅವರು ಮಾತನಾಡಿ, ಮಂಗಳೂರು ನಗರದ ಘನ ತ್ಯಾಜ್ಯ ನಿರ್ವಹಣೆಯನ್ನು ಖಾಸಗಿಯವರಿಗೆ ಗುತ್ತಿಗೆ ಕೊಡುತ್ತಿದ್ದಾರೆ ಆದರೆ ಅದನ್ನು ಪರಿಶೀಲನೆ ಮಾಡಿದಾಗ ಪಾಲಿಕೆಯೇ ವಾಹನ ಖರೀದಿಸಿ ಪಾಲಿಕೆಯೇ ಪೌರ ಕಾರ್ಮಿಕರನ್ನು ನಿಯೋಜಿಸಿ ಗುತ್ತಿಗೆದಾರರಿಗೆ ಕೊಟ್ಟು ಕೆಲಸ ಮಾಡಿಸುವುದು ಇದು ನನ್ನ ಅನುಭವದ ಪ್ರಕರ ಇದು ತಪ್ಪಾದ ಪಸ್ತಾವನೆ ಎಂದು ಹೇಳಿದರು.

ಬಳಿಕ ಪಾಲಿಕೆಯ ವಿಪಕ್ಷ ನಾಯಕ ಎ.ಸಿ.ವಿನಯ್‍ರಾಜ್ ಮಾತನಾಡಿ ಈ ಹಿಂದೆ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇದ್ದ ಸಂದರ್ಭ ಸ್ವಚ್ಚ ಮಂಗಳೂರು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಆ್ಯಂಟನಿ ಸೋಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್ ಕಂಪನಿಗೆ ಕಸ ವಿಲೇವಾರಿಯ ಜವಾಬ್ದಾರಿಯನ್ನು ನೀಡಿದ್ದೆವು. ಆದರೆ ಈಗ ಬಿಜೆಪಿ ಆಡಳಿತದಲ್ಲಿ ಅದಕ್ಕೆ ತಧ್ವಿರುದ್ಧವಾಗಿ ಸುಮಾರು 38 ಕೋಟಿ ರೂಪಾಯಿಗಳ ವ್ಯವಹಾರವನ್ನು ಮಾಡಿಕೊಂಡು ವಾಹನ ಖರೀದಿ ಮತ್ತು 1176 ಪೌರ ಕಾರ್ಮಿಕರನ್ನು ನೇಮಿಸಿ ಘನ ತ್ಯಾಜ್ಯ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ಕೊಡುತ್ತಿರುವುದು ಖಂಡನೀಯ ಎಂದು ಹೇಳಿದು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಸಾಲಿಯಾನ್ ಹಾಗೂ ದಕ್ಷಿಣ ಬ್ಲಾಕ್ ಸಮಿತಿಯ ಕಾರ್ಯಧ್ಯಕ್ಷರಾದ ಹೊನ್ನಯ. ಟಿ ಕೊಪೆರ್Çರೇಟರ್ ಗಳಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜಾ, ಜೆಸಿಂತ ಅಲ್ಫ್ರೆಡ್, ಅಬ್ದುಲ್ ಲತೀಫ್,ಕೇಶವ ಮರೋಳಿ,ಅಶ್ರಫ್ ಬಜಾಲ್, ಶಂಶುದ್ದೀನ್, ಝೀನತ್ ಶಂಶುದ್ದೀನ್, ಅನಿಲ್ ಕುಮಾರ್ ಹಾಗೂ ಪಕ್ಷದ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಪದಾಧಿಕಾರಿಗಳು, ಮಾಜಿ ಮ. ನ. ಪಾ ಸದಸ್ಯರು ಹಾಜರಿದ್ದರು.

Related Posts

Leave a Reply

Your email address will not be published.