ಬಾಲ ಮಂದಿರದಿಂದ ಬಾಲಕರು ನಾಪತ್ತೆ

ನಗರದ ಬೋಂದೆಲ್‌ನಲ್ಲಿರುವ ಬಾಲಕರ ಬಾಲ ಮಂದಿರದಿಂದ ನ.26 ರ ರವಿವಾರ ಮುಂಜಾನೆ ಶ್ಯಾಮವೆಲ್ ಟೊಪ್ಪು (16) ಮತ್ತು ವಡಲಮನಿ ಚಿರಂಜೀವ (16) ಎಂಬವರು ನಾಪತ್ತೆಯಾಗಿರುವ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಯಾಮುವೆಲ್ 150 ಸೆಂ.ಮೀ ಎತ್ತರವಿದ್ದು, ಬಿಳಿ ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಎದುರಿನಲ್ಲಿ ಹಳದಿ ಬಣ್ಣದ ಪಟ್ಟಿ ಇರುವ ತಿಳಿನೀಲಿ ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ವಡಲಮನಿ ಚಿರಂಜೀವಿ 150 ಸೆಂ.ಮೀ ಎತ್ತರವಿದ್ದು ಎಣ್ಣೆಗಪ್ಪು ಮೈಬಣ್ಣ, ದುಂಡು ಮುಖ, ಸದೃಢ ಮೈಕಟ್ಟು ಹೊಂದಿದ್ದಾನೆ. ಬಿಳಿ ಬಣ್ಣದ ಉದ್ದ ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಮಾಹಿತಿ ಸಿಕ್ಕವರು ಕಾವೂರು ಪೊಲೀಸ್ ಠಾಣೆ (0824-2220533)ಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ವಡಲಮನಿ ಚಿರಂಜೀವ ಆಂದ್ರಪ್ರದೇಶದ ಮೂಲದವನಾಗಿದ್ದು, ವಿಶಾಖ ಪಟ್ಟಣ ಬಂದರಿಲ್ಲಿ ಕೆಲಸಕ್ಕೆಂದು ತೆರಳಿದ್ದವ ಅಲ್ಲಿಗೆ ಬಂದಿದ್ದ ಹಡಗಿಗೆ ಆಕಸ್ಮಿಕವಾಗಿ ಪ್ರವೇಶಿಸಿ ಮಂಗಳೂರು ತಲುಪಿದ್ದ. ಹಡಗಿನ ಸಿಬ್ಬಂದಿಯೂ ಆತನನ್ನು ಗಮನಿಸಿರಲಿಲ್ಲ. ಕಲ್ಲಿದ್ದಲು ಹೊತ್ತಿದ್ದ ಹಡಗಿನ ಸಿಬ್ಬಂದಿ ಮಂಗಳೂರು ಬಂದರಿನಲ್ಲಿ ಇಳಿಸಿ ಕರಾವಳಿ ಕಾವಲು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ವೇಳೆ ಆಕಸ್ಮಿಕವಾಗಿ ಹಡಗು ಪ್ರವೇಶಿಸಿ ನಿದ್ದೆ ಮಾಡಿದ್ದೆ ಎಂದು ಬಾಲಕ ಹೇಳಿದ್ದ. ಕರಾವಳಿ ಕಾವಲು ಪೊಲೀಸರು ಮಕ್ಕಳ ಕಲ್ಯಾಣ ಸಮಿತಿಯವರಿಗೆ ಒಪ್ಪಿಸಿದ್ದರು. ಬಾಲಮಂದಿರದಲ್ಲಿದ್ದ ಈತನನ್ನು ಮನೆಗೆ ತಲುಪಿಸುವ ಸಿದ್ದತೆ ನಡೆದಿತ್ತು. ಅಷ್ಟರಲ್ಲೇ ಈತ ತಪ್ಪಿಸಿಕೊಂಡಿದ್ದಾನೆ.

ಶ್ಯಾಮವೆಲ್ ಟೊಪ್ಪು ಛತ್ತಿಸ್ ಗಡದವನು. ಸುರತ್ಕಲ್ ಮೀನು ಸಂಸ್ಕರಣಾ ಘಟಕವೊಂದರಲ್ಲಿ ಬಾಲಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅಕ್ಟೋಬರ್ ನಲ್ಲಿ ಕಾರ್ಮಿಕ ಇಲಾಖೆಯವರು ಪತ್ತೆ ಹಚ್ಚಿ ಬಾಲ ಮಂದಿರದಲ್ಲಿರಿಸಿ ಮನೆಯವರಿಗೆ ಮಾಹಿತಿ ನೀಡಲಾಗಿತ್ತು ಅಷ್ಟರಲ್ಲೇ ಇಬ್ಬರೂ ತಪ್ಪಿಸಿಕೊಂಡಿದ್ದಾರೆ.

 

Related Posts

Leave a Reply

Your email address will not be published.