ಬಿಜೆಪಿ ಕಾರ್ಯಕರ್ತರಿಂದ ಸೇವಾ ಸಮರ್ಪಣಾ ಕಾರ್ಯಕ್ರಮ
ಆಲೂರು : ತಾಲೂಕಿನ ಬಿಜೆಪಿ ಸಭಾಂಗಣದಲ್ಲಿ ಇಂದು ಆಯೋಜಿಸಲಾದ ಸೇವಾ ಸಮರ್ಪಣ ಕಾರ್ಯಕ್ರಮವನ್ನು ಬಿಜೆಪಿ ತಾಲೂಕು ಅಧ್ಯಕ್ಷರಾದ ಹರೀಶ್ ಅವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತಾಲೂಕು ಅಧ್ಯಕ್ಷರಾದ ಹರೀಶ್ ರವರು ನಮ್ಮ ಯುವ ಮೋರ್ಚಾ ರವರು ಬ್ಲಡ್ ಬ್ಯಾಂಕ್ ಕ್ಯಾಂಪನ್ನು ಮಾಡಿ ಸೇವಾ ಸಮರ್ಪಣೆಯಲ್ಲಿ ಭಾಗವಹಿಸಿ ಸಹಕರಿಸಿದ್ದಾರೆ. ಕಟ್ಟಾಯ ಭಾಗದಲ್ಲಿಯೂ ಕೂಡ ಸ್ವಚ್ಛತಾ ಕಾರ್ಯಕ್ರಮ ವಿರಬಹುದು, ಗಾಂಧಿ ಜಯಂತಿ ಕಾರ್ಯಕ್ರಮ ವಿರಬಹುದು, ಯಾರು ಯಾರು ಜವಾಬ್ದಾರಿತನ ತೆಗೆದುಕೊಂಡಿದ್ದರು ಅವರಿಗೆಲ್ಲ ನಾನು ಹೃತ್ಪೂರ್ವಕವಾದ ಅಭಿನಂದನೆಗಳು ಎಂದು ಹೇಳಿದರು.
ನಂತರ ಸಭೆಯನ್ನು ಉದ್ದೇಸಿ ಮಾತಾಡಿದ ಜಿಲ್ಲೆಯ ಬಿಜೆಪಿ ಮುಖಂಡರಾದ ರಾಜ್ ಕುಮಾರ್ ರವರು ಈ ಸಭೆಯ ಉದ್ದೇಶವೇನೆಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ71ನೇ ಹುಟ್ಟು ಹಬ್ಬದ ಪ್ರಯುಕ್ತ ಇಡೀ ದೇಶದಾದ್ಯಂತ ಅದರಲ್ಲೂ ಎಲ್ಲಾ ಮತಗಟ್ಟೆಗಳಲ್ಲಿ ಕಾರ್ಯಕ್ರಮಗಳು, ಸೇವಾಚಟುವಟಿಕೆ ಮುಖಾಂತರ ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಸಮರ್ಪಣಾ ಭಾವದಿಂದ ಆಚರಣೆ ಮಾಡುತ್ತಾ ಬಂದು ಇವತ್ತು ಅಂತಿಮ ಘಟ್ಟದ ಕಾರ್ಯಕ್ರಮವನ್ನು ತಲುಪಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಮುಖಂಡರಾದ ರಾಜಕುಮಾರ್, ತಾಲೂಕು ಅಧ್ಯಕ್ಷರಾದ ಹರೀಶ್ ರವರು, ಕದಾಳುಲೋಕೇಶ್ ರವರು, ರಮೇಶ್ ಹಳೆಯ ಆಲೂರು, ಹೇಮಂತ್, ಅಜಿತ್, ಅನುಪ ರಾಜ್ ಮತ್ತಿತರರು ಉಪಸ್ಥಿತರಿದ್ದರು.