ಬೋರ್ಕಳ-ಉಪ್ಪಳ ಸಂಪರ್ಕಿಸುವ ರಸ್ತೆಯ ದುಸ್ಥಿತಿ: ರಸ್ತೆಯಲ್ಲೇ ಹರಿಯುತ್ತಿರುವ ಮಳೆ ನೀರು

ಮಂಜೇಶ್ವರ: ಮಂಜೇಶ್ವರ ವರ್ಕಾಡಿ ಪಂಚಾಯತಿಗೆ ಒಳಪಟ್ಟ ಆನೆಕ್ಕಲ್ಲು ಕತ್ತರಕೋಡಿ ಬೋರ್ಕಳ ಮಾರ್ಗವಾಗಿ ಉಪ್ಪಳಕ್ಕೆ ಹೋಗುವ ರಸ್ತೆಯ ಸ್ಥಿತಿ ತುಂಬಾ ಶೋಚನೀಯವಾಗಿದೆ.

ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಹಾಗೂ ನೂರಾರು ಕಾಲ್ನಡಿಗೆ ಯಾತ್ರಿಕರು ಆಶ್ರಯಿಸುವ ಏಕೈಕ ರಸ್ತೆಯಾಗಿದೆ. ಜನರು ನಡೆದು ಹೋಗಲು ಅಥವಾ ತುರ್ತು ಸಮಯಗಳಲ್ಲಿ ರೋಗಿಗಳನ್ನು ಕೊಂಡೊಯ್ಯಲು ಬೇರೆ ದಾರಿಯಿಲ್ಲ ಏಕೆಂದರೆ ಈ ಮಳೆಗಾಲದಲ್ಲಿ ಜನರು ನಡೆಯುವುದು ತುಂಬಾ ಕಷ್ಟದಿಂದ ಹಾಗೂ ವಾಹನಗಳ ಸಂಚಾರವೂ ತುಂಬಾ ಕಷ್ಟಕರವಾಗಿದೆ.ಹಲವಾರು ಬಾರಿ ಪಂಚಾಯತ್ ವಾರ್ಡ್ ಸದಸ್ಯರಿಗೂ ಸಂಬಂಧಪಟ್ಟ ಅಧಿಕಾರಿಗಳಿಗೂ ಅದೇ ರೀತಿ ಸ್ಥಳೀಯ ರಾಜಕೀಯ ಮುಖಂಡರಿಗೆ ಸಮಸ್ಯೆಯ ಬಗ್ಗೆ ದೂರು ನೀಡಿದರೂ ಈವರೆಗೆ ಯಾವುದೇ ಪರಿಹಾರ ದೊರೆತಿಲ್ಲ. ಕಂಡೂ ಕಾಣದ ಜಾಣ ಕುರುಡರಂತೆ ವರ್ತಿಸುತ್ತಿರುವ ಅಧಿಕೃತರ ವಿರುದ್ಧ ನಾಡಿನ ಜನತೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಮಳೆ ನೀರು ರಸ್ತೆಯಲ್ಲಿ ತುಂಬಿ ತೋಡಿನಂತೆ ಹರಿಯುತ್ತಿದೆ. ಹಾಗೂ ಮಾರ್ಗದ ಹತ್ತಿರ ಇರುವ ಒಂದು ಮನೆಯ ಮಳೆಯ ನೀರನ್ನು ಕೂಡ ರಸ್ತೆಗೆ ಇಳಿಸಲಾಗುತ್ತಿದೆ ಆ ಕುಟುಂಬದೊಂದಿಗೆ ಮಾತನಾಡಲು ಸ್ಥಳೀಯರು ವಾರ್ಡ್ ಸದಸ್ಯರಿಗೆ ಹಲವಾರು ಬಾರಿ ದೂರು ನೀಡಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರ ಕಂಡುಬಂದಿಲ್ಲ ಎಂಬುದಾಗಿ ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಂಬಂಧಪಟ್ಟವರು ಆದಷ್ಟು ಬೇಗ ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪಂ. ಕಚೇರಿ ಮುಂಬಾಗದಲ್ಲಿ ಉಪವಾಸ ಸತ್ಯಾಗ್ರಹದಂತಹ ಪ್ರತಿಭಟನೆಗೆ ಮುಂದಾಗಲಿರುವುದಾಗಿ ಸ್ಥಳೀಯರು ಎಚ್ಚರಿಕೆಯನ್ನು ನೀಡಿದ್ದಾರೆ.

 

Related Posts

Leave a Reply

Your email address will not be published.