ಭಾರತದ ರಾಯಭಾರಿ ಪಿಯೂಷ್ ಶ್ರೀವಾಸ್ತವ ಅವರನ್ನು ಭೇಟಿಯಾದ ಕನ್ನಡ ಸಂಘ ಬಹರೈನ್ ನಿಯೋಗದ ಸದಸ್ಯರು

ಕನ್ನಡ ಸಂಘ ಬಹ್ರೈನ್ನ ನಿಯೋಗದ ಸದಸ್ಯರು ಇಂದು ಬಹ್ರೈನ್ನಲ್ಲಿರುವ ಭಾರತದ ರಾಯಭಾರಿ ಪಿಯೂಷ್ ಶ್ರೀವಾಸ್ತವ ಅವರನ್ನು ಭೇಟಿ ಮಾಡಿದರು. ನಿಯೋಗದಲ್ಲಿ ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ, ಮಾಜಿ ಅಧ್ಯಕ್ಷರು ಮತ್ತು ಕನ್ನಡ ಭವನ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಆಸ್ಟಿನ್ ಸಂತೋಷ್, ಕಟ್ಟಡ ನಿಧಿ ಸಂಗ್ರಹಣೆ ಸಮಿತಿಯ ಅಧ್ಯಕ್ಷರಾದ ಅಮರನಾಥ್ ರೈ ಇದ್ದರು.
ಭೇಟಿಯ ಸಂದರ್ಭದಲ್ಲಿ ನೂತನ ಕಟ್ಟಡ ನಿರ್ಮಾಣ, ಕರ್ನಾಟಕ ರಾಜ್ಯೋತ್ಸವ, ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಭಾರತ ಮತ್ತು ಬಹ್ರೈನ್ ನಡುವಿನ ರಾಜತಾಂತ್ರಿಕ ಸಂಬಂಧದ ಸುವರ್ಣ ಮಹೋತ್ಸವ ಮೊದಲಾದ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಭಾರತೀಯ ದೂತಾವಾಸದ ಕಾರ್ಯದರ್ಶಿ ಇಹ್ಜಾಸ್ ಅಸ್ಲಮ್ ಶೇಖ್ ಉಪಸ್ಥಿತರಿದ್ದರು.