ಮಂಗಳೂರಿನಲ್ಲಿ ರೋಗಿಗೆ ನಿಫಾ ವೈರಸ್ ಲಕ್ಷಣ ಪತ್ತೆ ವಿಚಾರ : ಉಡುಪಿ ಮತ್ತು ಕಾರವಾರ ಅಲರ್ಟ್
ಕೊರೊನಾದೊಂದಿಗೆ ನಿಫಾ ವೈರಸ್ ಮತ್ತಷ್ಟು ಆತಂಕ ತಂದೊಡ್ಡಿದ್ದು, ಇದೀಗ ಕಾರವಾರದ ವ್ಯಕ್ತಿಯೊಬ್ಬಗೆ ಸೋಂಕಿನ ಕೆಲ ಲಕ್ಷಣ ಕಂಡು ಬಂದಿದೆ. ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಾರವಾರದ ವ್ಯಕ್ತಿ ಗೋವಾದ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಕಿಟ್ ತಯಾರಿಕಾ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಾರವಾರಕ್ಕೆ ಬೈಕ್ ನಲ್ಲಿ ಮಳೆಯಲ್ಲಿ ಬಂದಿದ್ದು, ಆತನಿಗೆ ನಿಫಾ ಸೋಂಕಿನ ಶಂಕೆ ಇಲ್ಲದಿದ್ದರೂ ನಿರ್ಲಕ್ಷ ಮಾಡಲು ಸಾಧ್ಯವಾಗದ ಕಾರಣ ಟೆಸ್ಟ್ ಗೆ ಕಳುಹಿಸಿದ್ದೇವೆ” ಎಂದರು. ಇನ್ನು ಪುಣೆಯಿಂದ ರಿಪೋರ್ಟ್ ಕೂಡ ಬೇಗ ತರಿಸುವ ವ್ಯವಸ್ಥೆ ಆಗಿದ್ದು, ಯುವಕನ ಮನೆಯವರನ್ನು ಐಸೋಲೇಶನ್‌ನಲ್ಲಿ ಇಡಲಾಗಿದೆ. ಅವನು ಸಂಪರ್ಕ ಮಾಡಿದವರನ್ನು ಪತ್ತೆ ಹಚ್ಚಲಾಗಿದ್ದು, ಉಡುಪಿ ಮತ್ತು ಕಾರವಾರ ಜಿಲ್ಲಾಡಳಿತಕ್ಕೆ ಅಲರ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.