ಮಂಜೇಶ್ವರದಲ್ಲಿ ಎಲ್‍ಡಿಎಫ್‍ನಿಂದ ಲಕ್ಷದ್ವೀಪ ಸಂರಕ್ಷಿಸಿ ಪ್ರತಿಭಟನೆ

ಮಂಜೇಶ್ವರ: ಲಕ್ಷದ್ವೀಪ ಸಂರಕ್ಷಿಸಿರಿ ಎಂಬ ಘೋಷಣೆಯನ್ನು ಮುಂದಿಟ್ಟುಕೊಂಡು ಎಲ್‍ಡಿಎಫ್ ಕೇರಳ ರಾಜ್ಯ ಸಮಿತಿಯ ಕರೆಯಂತೆ ಮಂಜೇಶ್ವರ ಪ್ರಧಾನ ಅಂಚೆ ಕಚೇರಿ ಮುಂದೆ ನಡೆದ ಧರಣ ಸತ್ಯಾಗ್ರಹವನ್ನು ಎಲ್‍ಡಿಎಫ್ ಮಂಜೇಶ್ವರ ಮಂಡಲ ಸಂಚಾಲಕ ಬಿವಿ.ರಾಜನ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಪ್ರಫುಲ್ ಪಾಟೀಲ್ ಎಂಬ ಸಂಘ ಪರಿವಾರದ ಏಜಂಟನ್ನು ಮುಂದಿಟ್ಟು ಲಕ್ಷದ್ವೀಪ ಜನತೆಯೊಂದಿಗೆ ನಡೆಸುತ್ತಿರುವ ಯುದ್ಧವನ್ನು ಕೊನೆಗಾಣಿಸಬೇಕು, ಸ್ಥಳೀಯ ಜನರ ಜೀವನ ಶೈಲಿ ಹಾಗೂ ಲಕ್ಷ ದ್ವೀಪಗಳ ಪರಿಸರ ವ್ಯವಸ್ಥೆಯನ್ನು ನಾಶಗೊಳಿಸುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ಹೇಳಿದ ಅವರು ಲಕ್ಷದ್ವೀಪ ಅಭಿವೃದ್ಧಿಯ ಕಾರ್ಯಸೂಚಿಯ ಭಾಗವಾಗಿ ತೆಂಗಿನ ಮರಗಳಿಗೂ ಕೇಸರಿ ಬಣ್ಣ ಬಳಿಯುತ್ತಿರುವ ಸಂಘಪರಿವಾರದ ಕ್ರಮ ಖಂಡನೀಯ ಎಂದು ಹೇಳಿದರು. ಸಿಪಿಐ(ಎಂ)ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಕೆ.ಕಮಲಾಕ್ಷ ಅಧ್ಯಕ್ಷತೆ ವಹಿಸಿದರು. ನೇತಾರರಾದ ಡಾ.ಕೆ.ಎ.ಖಾದರ್, ಎಂ.ಡಿ.ಮುಸ್ತಫಾ, ದಯಾಕರ ಹೊಸಂಗಡಿ, ಪ್ರದೀಶ್ ಬಡಾಜೆ,ಎಸ್.ರಾಮಚಂದ್ರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ರೆಹಮಾನ್ ಮಂಜೇಶ್ವರ

Related Posts

Leave a Reply

Your email address will not be published.