ಲಾಕ್ ಡೌನ್ : ಕೋಲ್ಕೊತ್ತಾದ ಕುಟುಂಬಕ್ಕೆ ಪ್ರಯಾಣಕ್ಕೆ ನೆರವಾದ ಟೀಂ ಬಿ ಹ್ಯೂಮನ್
ಲಾಕ್‌ಡೌನ್ ಸಮಯದಲ್ಲಿ ಕೊಲ್ಕತ್ತಾದಿಂದ ಬಂದು ನಗರದಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದ ಮಿಶ್ರಾ ಮತ್ತು ಅವರ ಪತ್ನಿಗೆ ಇದೀಗ ಟೀಂ – ಬಿ ಹ್ಯೂಮನ್ ತಂಡವು ನೆರವಾಗಿದೆ. ಕೆಲಸ ನೀಮಿತ್ತ ಬಂದು, ಇಲ್ಲಿ ಯಾವುದೇ ಕೆಲಸ ಸಿಗದೇ, ಆಹಾರಕ್ಕೂ ಪರದಾಟ ನಡೆಸುತ್ತಿದ್ದ ಮಿಶ್ರಾರವರಿಗೆ ಕೊಲ್ಕತ್ತಾ ತೆರಳಲು ರೈಲು ಟಿಕೇಟ್ ಮತ್ತು ಪ್ರಯಾಣಕ್ಕೆ ಬೇಕಾದ ವೆಚ್ಚವನ್ನು ನೀಡಿ ಟೀಂ ಬಿ ಹ್ಯೂಮನ್ ನೀಡಿ ಸಹಕಕರಿಸಿದೆ.
ಮಿಶ್ರಾ ಕೊಲ್ಕತ್ತಾಕ್ಕೆ ಹೋಗಲು ಪ್ರಯಾಣ ಹಣವೂ ಇಲ್ಲದೆ ಕಂಗಾಲಾಗಿದ್ದ ಸಂದರ್ಭದಲ್ಲಿ ಟೀಂ ಬಿ ಹ್ಯೂಮನ್ ತಂಡ ನೆರವು ನೀಡಿದ್ದು, ದೊಡ್ಡ ಉಪಕಾರವಾಯಿತು ಎಂದು ಹೇಳಿದರು. ಲಾಕ್ ಡೌನ್ ನಾಗರಿಕರ ಬದುಕನ್ನು ಎಷ್ಟು ಕಾಡುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.
ಯುವಕರಲ್ಲಿ ಸಾಮಾಜಿಕ ಕಾಳಜಿ ಮತ್ತು ಸೇವಾ ಮನೋಭಾವ ಉತ್ತೇಜಿಸುವ ಉದ್ದೇಶದಿಂದ ಸಂಸ್ಥೆಯು ಈ ಅಭಿಯಾಕ್ಕೆ ಯುವಕರನ್ನು ಭಾಗವಹಿಸುವಂತೆ ಪ್ರೆರೇಪಿಸಿದೆ. ಸಮಾಜದ ಜನರ ಕಷ್ಟಗಳನ್ನು ಹತ್ತಿರದಿಂದ ನೋಡಿ ತಿಳಿದು, ಅವರಿಗೆ ಸ್ಪಂದಿಸುವ ಮನೋಭಾವ ಬೆಳೆಸಲು ಇದು ಸಹಕಾರಿಯಾಗಲಿದೆ ಎಂದು ಆಸಿಫ್ ಡೀಲ್ಸ್ ಹೇಳುತ್ತಾರೆ. ಈ ಸಂದರ್ಭ ಯುವಕರಾದ ಅಲ್ತಾಫ್, ಸಾದಿಕ್, ಮಿಷಾಬ್, ಶಬೀರ್, ರಿಯಾನ್, ಅಹ್ನಾಪ್ ಡೀಲ್ ಯುವಕರ ತಂಡದ ಪ್ರಯತ್ನಯವನ್ನು ಪ್ರಶಂಸಿದರು.