ವರುಣನ ಆರ್ಭಟ ಜಮೀನಿಗೆ ನುಗ್ಗಿದ ನೀರು : ಶುಂಠಿ ಬೆಳೆ ನೀರುಪಾಲು
ಆಲೂರು: ಆಲೂರು ತಾಲೂಕಿನಾದ್ಯಂತ ವರುಣ ಆರ್ಭಟಿಸಿ ಬೊಬ್ಬಿರಿಯುತ್ತಿದ್ದು ತಾಲೂಕು ಪಾಳ್ಯ ಚಂದ್ರಶೇಖರ್ ಎಂಬುವವರು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶುಂಠಿ ಬೆಳೆಗೆ ಶಂಕುತೀರ್ಥ ಹೊಳೆಯ ನೀರು ದಿಡೀರನೆ ನುಗ್ಗಿದ ಪರಿಣಾಮವಾಗಿ ಶುಂಠಿ ಬೆಳೆಯುವ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ ಅಲ್ಲದೆ ಭತ್ತದ ನಾಟಿಗಾಗಿ ಸಿದ್ದಪಡಿಸಿದ್ದ ಸಸಿ ಕೂಡ ನೀರಿನಲ್ಲಿ ಕೊಚ್ಚಿ ಹೋಗಿರುವ ಪ್ರಸಂಗ ತಾಲೂಕಿನಲ್ಲಿ ನಡೆದಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ನಾಶವಾಗಿದ್ದು ಬೇರೆ ದಾರಿ ಕಾಣದೆ ರೈತ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ಪರಿಸ್ಥಿತಿ ಬಂದಿದೆ.