ವಿ ವಿ ಸಂಧ್ಯಾ ಕಾಲೇಜಿನಲ್ಲಿ ಕೋವಿಡ್ 2ನೇ ಅಲೆ ನಿರ್ವಹಣೆಯ ಬಗ್ಗೆ ವೆಬಿನಾರ್
ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಮೇ 31, 2021 ರಂದು “ಕೋವಿಡ್ ಎರಡನೇ ಅಲೆ- ವರ್ತನಾತ್ಮಕ ನಿರ್ವಹಣೆ ಮತ್ತು ಮುನ್ನೆಚ್ಚರಿಕೆ” ಎಂಬ ವಿಷಯದಲ್ಲಿ ವೆಬಿನಾರನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿದ್ದ ನ್ಯಾಯವಾದಿಗಳೂ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರೂ ಆಗಿರುವ ಶ್ರೀ ವಿವೇಕಾನಂದ ಪಣಿಯಾಲ ಅವರು ಮಾತನಾಡಿ, ಕೋವಿಡ್ – 19ರ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ವೈದ್ಯಕೀಯ ಕ್ಷೇತ್ರ, ಪೋಲಿಸ್ ಪಡೆ, ಹಾಗೂ ಸರ್ಕಾರೇತರ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು.
ಬೆಂಗಳೂರಿನ ಅರವಿಂದ್ ಲಿಮಿಟೆಡ್ ನ ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ಶ್ರೀಮತಿ ರೂಪಾ ರಾವ್ ಅವರು ಕೋವಿಡ್-19 ಹಂತಗಳು ಹಾಗೂ ಅದು ತೀವ್ರವಾಗಿ ಹರಡಲು ನಮ್ಮ ನಿರ್ಲಕ್ಷ್ಯವೇ ಮುಖ್ಯ ಕಾರಣ. ಸರಿಯಾದ ಆಹಾರ ಪದ್ಧತಿ, ಯೋಗ-ಪ್ರಾಣಾಯಾಮ ಹಾಗೂ ನಮ್ಮ ಜೀವನ ಶೈಲಿಯಲ್ಲಿ ಆರೋಗ್ಯಕರ ಬದಲಾವಣೆಯನ್ನು ತಂದಾಗ ಕೊರೊನಾವನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾಕ್ಟರ್ ಸುಭಾಷಿಣಿ ಶ್ರೀವತ್ಸ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದದರು ಎಂಕಾಂ, ಎಂಬಿಎ (ಐಬಿ) ಹಾಗೂ ಎಂಎ ವಿಭಾಗದ ಸಂಯೋಜಕರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಶ್ರೀಮತಿ ಅಕ್ಷತಾ ಹಾಗೂ ಶ್ರೀಮತಿ ಮಮತಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಯಶ್ವಿತ ಪ್ರಾರ್ಥಿಸಿ, ಯಶವಂತ್ ರಸ್ಕಿನ್ಹಾ ವಂದಿಸಿದರು ಹಾಗೂ ಕು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.