ಶಕ್ತಿನಗರ ಸಾನಿಧ್ಯ ವಸತಿಯುತ ಶಾಲೆ : ಬೆಳಕಿನ ಹಬ್ಬದ ಸಂಭ್ರಮ

ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು.

ಸಾನಿಧ್ಯದಲ್ಲಿ ದೀಪಾವಳಿ ಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಸೇರಿ ಸಂಭ್ರಮದಿಂದ ಆಚರಿಸಲಾಯಿತು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ಅವರು ವಿಶೇಷ ವಿದ್ಯಾರ್ಥಿನಿ ಮಾನ್ಸಿ ಪ್ರಜಾಪತಿ ಹಾಗೂ ಗಣ್ಯರ ಜೊತೆ ಸೇರಿ ಜ್ಯೋತಿ ಬೆಳಗಿಸಿ ದೀಪಾವಳಿ ಹಬ್ಬವನ್ನು ಉದ್ಘಾಟಿಸಿ ಸಂದೇಶ ನೀಡಿದರು. ಮಾತ್ರವಲ್ಲ ವಿಶೇಷ ಮಕ್ಕಳ ಜೊತೆ ಸುಡು ಮದ್ದನ್ನು ಬಿಟ್ಟು ಆನಂದಿಸಿದರು.

ಇದೇ ಸಂದರ್ಭದಲ್ಲಿ ನಂಬರ್೧ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಸಿಲ್ವರ್ ಬ್ಯಾಂಕ್ ಇದರ ಆಡಳಿತ ನಿರ್ದೇಶಕರು ಆಗಿರುವ ಯಾರಿ ಡಿಸೋಜಾ ಇವರನ್ನು ಸನ್ಮಾನಿಸಲಾಯಿತು. ವಿಶೇಷ ಮಕ್ಕಳು ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದರು. ಶ್ರೀಕೃಷ್ಣಜನ್ಮಾಷ್ಟಮಿ ಸಮಿತಿ ಕದ್ರಿ ಮಂಗಳೂರು ಇದರ ಮುಖ್ಯಸ್ಥರಾಗಿರುವ ದಿನೇಶ್ ದೇವಾಡಿಗ ಟ್ರಸ್ಟಿನ ಅಧ್ಯಕ್ಷರಾದ ಮಹಾಬಲ ಮಾರ್ಲ ಖಜಾಂಜಿ ಹಾಗೂ ಬೋಳೂರು ವಾರ್ಡಿನ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ಶಕ್ತಿನಗರ ವಾರ್ಡಿನ ಕಾರ್ಪೊರೇಟರ್ ಶ್ರೀ ಕಿಶೋರ್ ಕೊಟ್ಟಾರಿ ಕಾರ್ಯಕ್ರಮದ ಪ್ರಾಯೋಜಕರಾದ ಉದ್ಯಮಿ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.

ಡಾ ವಸಂತ ಕುಮಾರ್ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದರು ಶ್ರೀಮತಿ ಸುಮ ಡಿಸಿಲ್ವಾ ನಿರೂಪಿಸಿದರು ಮಹಾಬಲ ಮಾರ್ಲ ವಂದಿಸಿದರು ಡಾಕ್ಟರ್ ಅಶೋಕ್ ಪಂಡಿತ್ ಮಕ್ಕಳ ಸಂತೋಷಕ್ಕಾಗಿ ಸುಡುಮದ್ದುಗಳನ್ನು ಸಾನಿಧ್ಯಕ್ಕೆ ಕಳುಹಿಸಿಕೊಟ್ಟಿದ್ದರು.

Related Posts

Leave a Reply

Your email address will not be published.