ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಆಸಕ್ತ ಗುಂಪಿನ ರೈತರಿಗೆ ಟರ್ಪಾಲ್ ವಿತರಣೆ
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರವರ್ತಕರಾಗಿ ನಡೆಸುತ್ತಿರುವ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದಿಂದ ಮೂರು ಆಸಕ್ತ ಗುಂಪಿನ ರೈತರಿಗೆ ಇಪ್ಪತ್ತಮೂರು ಟರ್ಪಾಲ್ ನ್ನು ಒಕ್ಕೂಟದ ಅಧ್ಯಕ್ಷ ರಾದ ಶ್ರೀ ಚಂದ್ರ ಪೂಜಾರಿಯವರು ವಿತರಿಸಿದರು
ವಿತರಿಸಿ ಮಾತನಾಡಿದ ಅವರು ಆಕಸ್ಮಿಕ ಮಳೆ ಬರುತ್ತಿರುವ ಕಾರಣ ಭತ್ತ ಕಟಾವಿಗೆ ಸಹಾಯವಾಗಲೆಂದು ಒಕ್ಕೂಟದ ಸದಸ್ಯರಿಗೆ ಉತ್ತಮ ಗುಣಮಟ್ಟದ ಕ್ರಷಿ ಪರಿಕರಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗಿರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್,ಸಿಎಚ್ಎಸ್ಸಿ ಮೆನೇಜರ್ ರಾಜೇಶ್,ಸೇವಾ ಪ್ರತಿನಿಧಿಯಾದ ನಾಗಶ್ರಿ, ಹಾಗೂ ಸ್ಥಳೀಯ ಕೃಷಿಕ ಗಣೇಶ್ ಮತ್ತು ಯುವ ಕೃಷಿಕ ಶಶಿಕುಮಾರ್ ಪೂಜಾರಿ ಉಪಸ್ಥಿತರಿದ್ದರು.