ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ನ್ಯೂಟ್ರೀಲೈಟ್ ಕಾರ್ಯಕ್ರಮ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಮಕ್ಕಳಲ್ಲಿ ಆರೋಗ್ಯ ಮತ್ತು ಪೋಷಕಾಂಶಯುಕ್ತ ಆಹಾರದ ಬಗ್ಗೆ ಅರಿವು ನೀಡುವ ಉದ್ದೇಶದಿಂದ ಜೂನ್ ತಿಂಗಳಲ್ಲಿ ನ್ಯೂಟ್ರೀಲೈಟ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರಗಿತು. ಈ ಪ್ರಯುಕ್ತ ಆಯೋಜಿಸಿರುವ ವಿವಿಧ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಭಾಗವಹಿಸಿದರು. ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳ ಪ್ರಾತ್ಯಕ್ಷಿಕೆಗಳ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ನ್ಯೂಟ್ರಿಲೈಟ್ 2021 ಸಮಾಪನಗೊಂಡಿತು.


ಸಂಸ್ಥೆಯ ಪ್ರಾಂಶುಪಾಲರಾದ ವಂ.ಫಾ. ಮೆಲ್ವಿನ್ ಅನಿಲ್ ಲೋಬೋ ಎಸ್.ಜೆ ಅವರು ಮಾತನಾಡಿ ಪೋಷಕಾಂಶಯುಕ್ತ ಆಹಾರದ ಮಹತ್ವವನ್ನು ಮತ್ತು ಉತ್ತಮ ಆರೋಗ್ಯಕರ ಆಹಾರ ಸೇವನೆಯ ಅವಶ್ಯಕತೆಯನ್ನು ಒತ್ತಿ ಹೇಳಿದರು. ೮ನೇ ತರಗತಿಯ ವಿದ್ಯಾರ್ಥಿ ಕೆವಿನ್ ಪಿಂಟೋ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ‘ಇ- ಪ್ರಮಾಣ ಪತ್ರ’ ನೀಡಲಾಯಿತು. ಶ್ರೀಮತಿ ಅಕ್ವೀನಾ, ಶ್ರೀಮತಿ ಬಿಂದಿಯಾ, ಜೆವಿಟಾ, ಜ್ಯೋತ್ಸ್ನಾ ಕಾರ್ಯಕ್ರಮನ್ನು ಸಂಯೋಜಿಸಿದರು. ಏಳನೇ ತರಗತಿಯ ವಿದ್ಯಾರ್ಥಿನಿ ರಿಯಾ ಜೆಸ್ಸಿಕಾ ರೇಗೋ ಕಾರ್ಯಕ್ರಮವನ್ನು ನಿರ್ವಹಿಸಿದರು.

Related Posts

Leave a Reply

Your email address will not be published.