ಸಾರ್ವಜನಿಕ ಸ್ಥಳದಕ್ಕೆ ತ್ಯಾಜ್ಯ ಎಸೆದವರ ವಿರುದ್ಧ ಕ್ರಮ : ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ
ಹೆದ್ದಾರಿ ಪಕ್ಕದಲ್ಲಿ ಕೋಳಿ ತ್ಯಾಜ್ಯ ಎಸೆದು, ಗ್ರಾಪಂ.ಗೆ ದಂಡ ಕಟ್ಟದಿರುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಪ್ರಥಮ ಐದು ಸಾವಿರ ಮುಂದಿನ ಸಲ ಇಪ್ಪತ್ತೈದು ಸಾವಿರ ದಂಡ ವಿಧಿಸಿ ದಂಡ ಕಟ್ಟಲು ವಿಫಲವಾದರೆ ನನ್ನ ಗಮನಕ್ಕೆ ತನ್ನಿ ಎಂಬುದಾಗಿ ಉಡುಪಿ ಡಿ.ಸಿ. ಜಗದೀಶ್ ಹೆಜಮಾಡಿ ಗ್ರಾ.ಪಂ.ಅಧಿಕಾರಿಗಳಿಗೆ ಕಢಕ್ ಸೂಚನೆ ನೀಡಿದ್ದಾರೆ.
ಲಾಕ್ಡೌನ್ ಪರಿಸ್ಥಿಯನ್ನು ಪರಿಶೀಲನೆ ಮಾಡಿ ಅವ್ಯವಸ್ಥೆಯನ್ನು ಸರಿಪಡಿಸುವಂತ್ತೆ ಗ್ರಾ.ಪಂ.ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಬಳಿಕ ತ್ಯಾಜ್ಯ ನಿರ್ವಹಣೆ ಬಗ್ಗೆ ಡಿಸಿ ಪ್ರಶ್ನಿಸಿದಾಗ ಪಿಡಿಓ ಸುಮತಿ ಉತ್ತರಿಸಿ, ಹೆದ್ದಾರಿ ಪಕ್ಕ ತ್ಯಾಜ್ಯ ಸುರಿದ ಒಂದು ಅಂಗಡಿ ಮಾಲಿಕ ಐದು ಸಾವಿರ ದಂಡ ಕಟ್ಟಿದ್ದಾರೆ, ಆದರೆ ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯ ಕನ್ನಾಂಗಾರಿನಲ್ಲಿ ಕಾರ್ಯಚರಿಸುತ್ತಿರುವ ಕೋಳಿಯಂಗಡಿ ಮಾಲಿಕ ಐದು ಸಾವಿರ ದಂಡ ಕಟ್ಟಲು ನಿರಾಕರಿಸಿದ ಬಗ್ಗೆ ದೂರಿದಾಗ ಗರಂ ಆದ ಜಿಲ್ಲಾಧಿಕಾರಿ, ಈ ಬಗ್ಗೆ ನಿಮ್ಮ ಮೇಲಾಧಿಕಾರಿಯವರಿಗೆ ವರದಿ ನೀಡಿ ಅದನ್ನು ವಸೂಲಿ ಮಾಡಿ ಕೊಡೋಣ ಎಂದರು. ಈ ಸಂದರ್ಭ ಗ್ರಾ.ಪಂ.ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜೊತೆಗಿದ್ದರು.