ಸೀಲ್ಡೌನ್ ಪಟ್ಟಿಯಲ್ಲಿರುವ ಗ್ರಾಮದಲ್ಲಿ ವಾರದ ಸಂತೆ
ವಾರದ ಸಂತೆಗೆ ಉಡುಪಿ ಜಿಲ್ಲಾಡಳಿತದ ನಿರ್ಬಂಧ ವಿದ್ದರೂ ಯಾವುದೇ ಅಡೆತಡೆ ಇಲ್ಲದೆ ಪಡುಬಿದ್ರಿ ವಾರದ ಸಂತೆ ನಡೆಯುವ ಮೂಲಕ ಸೀಲ್ ಡೌನ್ ಪಟ್ಟಿಯಲ್ಲಿರುವ ಈ ಗ್ರಾಮದ ಜನ ಆತಂಕ ವ್ಯಕ್ತ ಪಡಿಸಿದ್ದಾರೆ.
ಮುಖ್ಯ ಮಾರುಕಟ್ಟೆಯ ರಸ್ತೆಯ ಎರಡೂ ಭಾಗಗಳಲ್ಲೂ ಹೆಸರಿಗಾಗಿಯೋ ಎಂಬಂತ್ತೆ ಬ್ಯಾರೀಕೆಡ್ ಅಳವಡಿಸಿದ್ದಾರೆ. ನಾಳೆಯಿಂದ ಐದು ದಿನಗಳ ಕಾಲ ಪಡುಬಿದ್ರಿ ಸೀಲ್ ಡೌನ್ ಎಂಬ ಕಾರಣಕ್ಕೋ ಏನೋ.. ಸಂತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬಂದರು. ಮುಂಜಾನೆಯಿಂದ ಹತ್ತು ಗಂಟೆಯವರೆಗೂ ಮಾರುಕಟ್ಟೆ ರಸ್ತೆ ಜನಜಂಗುಳಿಯಿಂದ ತುಂಬಿತ್ತು ಹತ್ತು ಗಂಟೆಯ ಬಳಿಕ ಸ್ಥಳಕ್ಕೆ ಬಂದ ಪಡುಬಿದ್ರಿ ಪೆÇಲೀಸರು ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಚ್ವಿಸಿದ್ದರು.