ಸ್ಪೋಟಕ ಪತ್ತೆಗೆ ಮಂಗಳೂರಿಗೆ ಬಂದ ರಾಣಿ

ಮಂಗಳೂರು ನಗರ ಪೊಲೀಸ್ ಕಮೀಷನರ್ ರೇಟ್ ವ್ಯಾಪ್ತಿಯ ಶ್ವಾನಪಡೆಗೆ ಬೆಂಗಳೂರಲ್ಲಿ ತರಬೇತಿ ಮುಗಿಸಿದ ರಾಣಿ ಬಂದಿದ್ದಾಳೆ. ಮನೋಜ್ ಶೆಟ್ಟಿ ಮತ್ತು ನಾಗೇಂದ್ರ ಅವರು ರಾಣಿಯ ಹ್ಯಾಂಡ್ಲರ್‍ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ರು. ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಶ್ವಾನದಳದಲ್ಲಿ ಇದುವರೆಗೆ ಒಂದು ಸ್ನಿಫರ್ ಶ್ವಾನವಿತ್ತು. ಶ್ವಾನ ಯಾವುದೇ ಅಪರಾಧ ಪ್ರಕರಣಗಳನ್ನ ಪತ್ತೆ ಮಾಡುವುವಲ್ಲಿ ಸಹಕಾರ ಮಾಡುತ್ತದೆ. ಗಣ್ಯ ವ್ಯಕ್ತಿಗಳು ನಗರಕ್ಕೆ ಭೇಟಿ ಸಂದರ್ಭ ಹಾಗೂ ಜಾತ್ರಾಮಹೋತ್ಸವ, ರೈಲ್ವೇ , ವಿಮಾನ ನಿಲ್ದಾಣ ಹಾಗೂ ಬಸ್ಟ್‍ಸ್ಯಾಂಡ್, ಮಹಲ್‍ಗಳ ಯಾವುದೇ ಪತ್ತೆಗಳಿಗೆ ಶ್ವಾನ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ರು.

Related Posts

Leave a Reply

Your email address will not be published.