ಹಂಸಲೇಖ ಅವರು ಪೇಜಾವರ ಶ್ರೀಗಳ ಬೃಂದಾವನದ ಮುಂಭಾಗದಲ್ಲಿ ಕ್ಷಮೆ ಯಾಚಿಸಲಿ : ಪ್ರದೀಪ್ ಕುಮಾರ್ ಕಲ್ಕೂರ
ಹಂಸಲೇಖ ಅವರು ಪೇಜಾವರ ಶ್ರೀಗಳ ಬೆಂಗಳೂರಿನಲ್ಲಿರುವ ಬೃಂದಾವನದ ಮುಂಭಾಗದಲ್ಲಿ ಕ್ಷಮೆ ಯಾಚನೆ ಮಾಡಲಿ ಎಂದು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಆಗ್ರಹಿಸಿದರು.ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಪೇಜಾವರ ಶ್ರೀಗಳಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಬಂದಾಗ ಎಲ್ಲರೂ ಜಾತಿ ಮತ ಬೇಧವಿಲ್ಲದೆ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಅವರು ಇಲ್ಲಸಲ್ಲದ ಹೇಳಿಕೆ ಸಮಾಜದ ಭಾವನೆಗಳ ಮೇಲೆ ನೋವನ್ನು ಉಂಟು ಮಾಡುವ ಹೇಳಿಕೆ ನೀಡಿದ್ದಾರೆ. ಸಂವಿಧಾನಾತ್ಮಕವಾಗಿ ಅವರಿಗೆ ಯಾವ ಶಿಕ್ಷೆ ಬೇಕಾದರೂ ದೊರಕಲಿ. ಈ ಬಗ್ಗೆ ನಮ್ಮದೇನು ತಕರಾರಿಲ್ಲ. ಆದರೆ ಜನರ ಭಾವನೆಗಳ ಧ್ವನಿಯಾಗಿ ಹೇಳುವುದೇನೆಂದರೆ, ಪೇಜಾವರ ಶ್ರೀಗಳ ಬೃಂದಾವನ ಬೆಂಗಳೂರಿನ ವಿದ್ಯಾಪೀಠದಲ್ಲಿದೆ ಅದರ ಮುಂಭಾಗದಲ್ಲಿ ಕ್ಷಮೆ ಯಾಚಿಸಲಿ ಎಂದು ಹೇಳಿದರು.ಈ ಸಂದರ್ಭದ ಸುದ್ದಿಗೋಷ್ಟಿಯಲ್ಲಿ ಹರಿಕೃಷ್ಣ ಪುನರೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.