ಹುಕ್ಕಾ ಬಾರ್ ಪದ ಬಳಕೆ ವಿಚಾರ: ಸಿ.ಟಿ ರವಿ ಅವರ ಸಂಸ್ಕೃತಿ ಜನರಿಗೆ ಗೊತ್ತಾಗುತ್ತೆ:ಮಾಜಿ ಸಚಿವ ಯು.ಟಿ ಖಾದರ್
ಸಿ.ಟಿ.ರವಿಯಿಂದ ಹುಕ್ಕಾ ಬಾರ್ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಯು.ಟಿ.ಖಾದರ್ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅವರು ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಮುವಾದದ ಅಫೀಮು ನಲ್ಲಿರುವವರು ಸಿ.ಟಿ.ರವಿಯವರು. ಇಂತಹ ಹುಕ್ಕಾ ಬಾರ್ ನಂತ ಪದ ಬಳಕೆ ಮಾಡತ್ತಾರೆ.ಇದರಿಂದ ಸಿ.ಟಿ ರವಿ ಅವರ ಸಂಸ್ಕೃತಿ ಜನರಿಗೆ ಗೊತ್ತಾಗುತ್ತದೆ. ಹುಕ್ಕಾ ಬಾರ್ ಕೂಡ ಅಫೀಮು. ಸಿ.ಟಿ.ರವಿ ಅದರ ಅಫೀಮುನಲ್ಲಿದ್ದಾರೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.