ಹೆಂಡತಿಯನ್ನು ಬಿಟ್ಟು ನಾದಿನಿಯೊಂದಿಗೆ ಗಂಡ ಪರಾರಿ..!! ಬೆಳ್ತಂಗಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು.!
ಮದುವೆಯಾಗಿ ಒಂದು ವರ್ಷವಾಗುವ ಮೊದಲೇ ಹೆಂಡತಿಯನ್ನು ತೊರೆದು ನಾದಿನಿಯೊಂದಿಗೆ ಓಡಿ ಹೋದ ಘಟನೆ ಬೆಳ್ತಂಗಡಿ ತಾಲೋಕಿನ ಕನ್ಯಾನದ ಕೈಕಂಬ ಎಂಬಲ್ಲಿ ನಡೆದಿದ್ದು ಸದ್ಯ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.ಕನ್ಯಾನದ ಮಹಮ್ಮದ್ ಎಂಬುವವರ ಪುತ್ರಿ ಸೌಧಳನ್ನು ಒಂಭಂತು ತಿಂಗಳ ಹಿಂದೆ ಪುಸ್ತಾಫಾ ಎಂಬುವವನು ಮದುವೆಯಾಗಿದ್ದ. ನಾದಿನಿ ರೈಹಾನಾಳೊಂದಿಗೆ ಮುಸ್ತಾಫಾ ಸಲುಗೆಯಿಂದ ಇದ್ದ. ಈ ನಡುವೆ ಸೌಧಳೊಂದಿಗೆ ಜಗಳವಾಡಿ ಮಾತು ಬಿಟ್ಟಿದ್ದ ಎನ್ನಲಾಗುತ್ತಿದೆ. ಜುಲೈ 8ರಂದು ಸುಮಾರು 6:45ರ ಹೊತ್ತಿಗೆ ಮುಸ್ತಾಫಾ ಅವನ ತಾಯಿಯೊಂದಿಗೆ ಕನ್ಯಾಡಿಯಲಿದ್ದ ಮಾವನ ಮನೆಯ ಹತ್ತಿರ ಬಂದಿದ್ದ ಎನ್ನಲಾಗುತ್ತಿದೆ. ಈ ವೇಳೆ ನಾದಿನಿ ರೈಹಾನಾ ಮುಸ್ತಾಫನೊಂದಿಗೆ ಪರಾರಿಯಾಗಿದ್ದಾಳೆ. ಸದ್ಯ ನಾಪತ್ತೆ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.