HomeFresh Newsಕೊಂಚಾಡಿಯ ಶ್ರೀ ರಾಮಾಶ್ರಮ ಶಾಲೆಯಲ್ಲಿ ಕೋವಿಡ್ ಲಸಿಕೆ ಶಿಬಿರ

ಕೊಂಚಾಡಿಯ ಶ್ರೀ ರಾಮಾಶ್ರಮ ಶಾಲೆಯಲ್ಲಿ ಕೋವಿಡ್ ಲಸಿಕೆ ಶಿಬಿರ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ವಾರ್ಡ್ 22 ಕದ್ರಿ ಬಿ ನಲ್ಲಿರುವ ಕೊಂಚಾಡಿಯ ಶ್ರೀ ರಾಮಾಶ್ರಮ ಶಾಲೆಯಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಉಚಿತ ಕೋವಿಡ್ ಲಸಿಕಾ ಶಿಬಿರಕ್ಕೆ ಶನಿವಾರ ಚಾಲನೆ ನೀಡಿದರು.

5೦೦ ಕ್ಕೂ ಹೆಚ್ಚು ನಾಗರಿಕರು ಈ ಲಸಿಕಾ ಅಭಿಯಾನದ ಸದುಪಯೋಗ ಪಡೆದುಕೊಂಡರು.ಶಿಬಿರದಲ್ಲಿ ಮನಪಾ ಸದಸ್ಯರಾದ ಜಯಾನಂದ ಅಂಚನ್, ಶಾಲಾ ಮುಖ್ಯೋಪಾಧ್ಯಾಯರಾದ ಮಂಜಪ್ಪ ಬಿ, ಡಾ. ಮಹಿಮ ಗುಪ್ತ, ಆಶಾ ಕಾರ್ಯಕರ್ತೆಯಾದ ಸುಶೀಲ, ಪ್ರಮುಖರಾದ ಸೇವಂತಿ ಶ್ರೀಯಾನ್, ಕುಶಾಲಕ್ಷಿ, ಗಣೇಶ್ ಭಟ್, ಹರಿಪ್ರಸಾದ್, ಸಂಜಿತ್ ಶೆಟ್ಟಿ, ಉಮೇಶ್ ಶೆಟ್ಟಿ, ಜಯಂತ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments