HomeFresh Newsಪುತ್ತೂರಿನ ಮೊಟ್ಟೆತಡ್ಕದಲ್ಲಿ ನಡೆದ ಅಪಘಾತ : ಸಹ ಸವಾರ ಮೃತ್ಯು

ಪುತ್ತೂರಿನ ಮೊಟ್ಟೆತಡ್ಕದಲ್ಲಿ ನಡೆದ ಅಪಘಾತ : ಸಹ ಸವಾರ ಮೃತ್ಯು

ಪುತ್ತೂರು: ನ.9ರಂದು ರಾತ್ರಿ ಮೊಟ್ಟೆತ್ತಡ್ಕ ಸಮೀಪ ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದವರ ಪೈಕಿ ಸ್ಕೂಟರ್ ಹಿಂಬದಿ ಸವಾರ ಕುರಿಯ ನಿವಾಸಿ ವಸಂತ ರೈ ಬಳ್ಳಮಜಲು ಅವರು ಮೃತಪಟ್ಟಿದ್ದಾರೆ.

ಪುತ್ತೂರನಲ್ಲಿ ಮೇಸ್ತ್ರಿ ಕೆಲಸ ಮುಗಿಸಿಕೊಂಡು ಮನೆ ಕಡೆಗೆಂದು ಕುರಿಯ ನಿವಾಸಿ ನಾರಾಯಣ ನಾಯ್ಕ ಬಳ್ಳಮಜಲು ಅವರು ಚಲಾಯಿಸುತ್ತಿದ್ದ ಆಕ್ಟಿವಾ ಸ್ಕೂಟರ್ ಮೊಟ್ಟೆತ್ತಡ್ಕ ತಲುಪುತ್ತಿದ್ದಂತೆ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿತ್ತು. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ನಾರಾಯಣ ನಾಯ್ಕ ಮತ್ತು ಸಹಸವಾರ ಕುರಿಯ ಬಳ್ಳಮಜಲು ನಿವಾಸಿ ವಸಂತ ರೈ ಅವರು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದರು. ಡಿಕ್ಕಿಯ ರಭಸಕ್ಕೆ ನಾರಾಯಣ ನಾಯ್ಕ ಮತ್ತು ವಸಂತ ರೈ ಅವರು ಧರಿಸಿದ್ದ ಹೆಲ್ಮೆಟ್ ಹುಡಿಯಾಗಿದ್ದು, ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿತ್ತು. ತೀವ್ರ ಗಾಯಗೊಂಡಿರುವ ಗಾಯಾಳುಗಳಿಬ್ಬರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹ ಸವಾರ ವಸಂತ ರೈ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments