HomeFresh Newsಬಾಂಗ್ಲಾದೇಶದಲ್ಲಿ ಇಸ್ಕಾನ್ ದೇವಾಲಯಗಳ ಮೇಲೆ ದಾಳಿ : ಇಸ್ಕಾನ್ ಮಂದಿರದ ವತಿಯಿಂದ ಪ್ರತಿಭಟನೆ

ಬಾಂಗ್ಲಾದೇಶದಲ್ಲಿ ಇಸ್ಕಾನ್ ದೇವಾಲಯಗಳ ಮೇಲೆ ದಾಳಿ : ಇಸ್ಕಾನ್ ಮಂದಿರದ ವತಿಯಿಂದ ಪ್ರತಿಭಟನೆ

ಬಾಂಗ್ಲಾದೇಶದಲ್ಲಿ ಇಸ್ಕಾನ್ ದೇವಾಲಯಗಳ ಮೇಲೆ ದಾಳಿ ಹಾಗೂ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ , ಮಂಗಳೂರಿನ ಆರ್ಯಸಮಾಜ ಸಮೀಪದಲ್ಲಿರುವ ಇಸ್ಕಾನ್ ಮಂದಿರದ ವತಿಯಿಂದ ಪ್ರತಿಭಟನೆ ನಡೆಯಿತು. ಇದೇ ವೇಳೆ ಕೃಷ್ಣ ಕೀರ್ತನೆಗಳ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಕಾರುಣ್ಯ ಸಾಗರ್ ದಾಸ್ ಮಾತನಾಡಿ, ಬಾಂಗ್ಲಾದೇಶದ ಸರ್ಕಾರ ಹಿಂದೂಗಳಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು. ಜೊತೆ ರಕ್ಷಣೆಯನ್ನ ಕೊಡಬೇಕೆಂದು ಎಂದು ಅವರು ಆಗ್ರಹಿಸಿದರು.ಈ ವೇಳೆ ಕಾರ್ಯದರ್ಶಿ ಸನಂದನ ದಾಸ್, ಸಂಯೋಜಕ ರೋಹಿಣಿ ಸುತದಾಸ್, ಭಕ್ತರಾದ ಹರಿಚರಣ್ ದಾಸ್, ದಿನೇಶ್ ಪೈ, ನರಸಿಂಹ ಪ್ರಭು, ಉಮೇಶ್ ರಾವ್ ಸೇರಿದಂತೆ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments