HomeFresh Newsಮಂಗಳೂರು: ಸಚಿವ ಸಂಪುಟ ಸಭೆಗೆ ಅಂತಿಮ ಸಿದ್ಧತೆ

ಮಂಗಳೂರು: ಸಚಿವ ಸಂಪುಟ ಸಭೆಗೆ ಅಂತಿಮ ಸಿದ್ಧತೆ

ಮಂಗಳೂರಿನಲ್ಲಿ ಮೊದಲ ಬಾರಿ ಸೆ.18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಗೆ ದ.ಕ. ಜಿಲ್ಲಾ ಕಚೇರಿ‘ಪ್ರಜಾ ಸೌಧ’ದಲ್ಲಿ ಅಂತಿಮ ಸಿದ್ದತೆ ನಡೆಯುತ್ತಿದೆ.

ಸಚಿವ ಸಂಪುಟ ಸಭೆ ನಡೆಯುವ ಸಭಾಂಗಣವನ್ನು ಸುಂದರವಾಗಿ ಹೂವುಗಳಿಂದ ಅಲಂಕರಿಸಲಾಗಿದೆ. ಪ್ರಜಾ ಸೌಧದ ಎರಡನೇ ಮಹಡಿಯಲ್ಲಿರುವ ಈ ಸಭಾಂಗಣದ ಗೋಡೆಗಳಲ್ಲಿ ಕರಾವಳಿಯ ಪರಿಸರ, ಸಂಸ್ಕೃತಿಯನ್ನು ಬಿಂಬಿಸುವ ಸುಂದರ ಫೋಟೊಗಳು ರಾರಾಜಿಸುತ್ತಿದೆ.

ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಚಿವ ಸಂಪುಟದ ಹಲವು ಮಂದಿ ಸಚಿವರು , ಉನ್ನತ ಅಧಿಕಾರಿಗಳು ನಗರಕ್ಕೆ ಆಗಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ. 33 ಸಚಿವರು, ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು, ಸಚಿವರ ಆಪ್ತ ಕಾರ್ಯದರ್ಶಿಗಳು ಗನ್‌ಮ್ಯಾನ್‌ಗಳು, ವಾಹನ ಚಾಲಕರು ಸೇರಿದಂತೆ ಸುಮಾರು 180 ಮಂದಿ ಆಗಮಿಸುವ ನಿರೀಕ್ಷೆ ಇದೆ. ಅಪರಾಹ್ನ 2:30ರ ತನಕ ಸಚಿವ ಸಂಪುಟದ ಸಭೆ ಇರುತ್ತದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ನೇತೃತ್ವದಲ್ಲಿ ಜಿಲ್ಲಾಡಳಿತವು ಸಚಿವ ಸಂಪುಟ ಸಭೆಗೆ ಅಗತ್ಯದ ತಯಾರಿ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments