HomeFresh Newsವಿಜಯಪುರದ ಕನ್ನೋಳಿ ವಾಹನ ಚಾಲಕರಿಗೆ ಉಪಹಾರದ ವ್ಯವಸ್ಥೆ

ವಿಜಯಪುರದ ಕನ್ನೋಳಿ ವಾಹನ ಚಾಲಕರಿಗೆ ಉಪಹಾರದ ವ್ಯವಸ್ಥೆ

ವಿಜಯಪುರ ಜಿಲ್ಲೆಯ ಕನ್ನೊಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಯಕರ್ನಾಟಕ ಸಂಘಟನೆ ವಾಹನ ಚಾಲಕರ ಘಟಕದ ಸಹಯೋಗದಲ್ಲಿ ಸತತವಾಗಿ ನಾಲ್ಕು ದಿನಗಳಿಂದ ಉಪಹಾರ ಸೇವೆ ಮಾಡುತ್ತಿದ್ದಾರೆ.
ಕಾಶಿನಾಥ ಬಿರಾದಾರ ಎನ್ನುವರು ವಾಹನದ ಚಾಲಕನಾಗಿದ್ದು ಕಳೆದ ವಾರ ವಾಹನ ಚಲಾಯಿಸುವಾಗ ಊಟ ಸಿಗದೆ ಪರದಾಡಿ ತುಂಬಾ ಸಂಕಷ್ಟ ಅನುಭವಿಸಿದ್ದರು.
ಆದರಿಂದ ಚಾಲಕರ ತೊಂದರೆಗೆ ಸ್ಪಂದಿಸುವ ಮನಸ್ಸಿಂದ ತಮಗಾದ ಊಟದ ತೊಂದರೆ ಬೇರೆ ಚಾಲಕರು ಅನುಭವಿಸಬಾರದು ಎಂದು ಸತತವಾಗಿ ನಾಲ್ಕು ದಿನದಿಂದ ತಮ್ಮ ದುಡಿಮೆಯ ಹಣದಿಂದ ಕನ್ನೊಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತತವಾಗಿ ನಾಲ್ಕು ದಿನದಿಂದ ವಾಹನ ಚಾಲಕರಿಗಾಗಿ ಉಪಹಾರ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ

ಈ ಕಾರ್ಯಕ್ಕೆ ಕಾಶಿನಾಥ ಅವರ ಜೊತೆ ಗೆಳೆಯರಾದ ದಾನೇಶ ಬಿರಾದಾರ. ಶಿವಾನಂದ ಹಳ್ಳಿ ವಿರೇಶ ಬಿರಾದಾರ ಅನಿಲ ರೋಡಗಿ ಸಾತ ನೀಡಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments