Home 2024 July

ಮೂಡುಬಿದಿರೆ : ಅರ್ಚಕ ಅಡಿಗಳ್ ಶ್ರೀನಿವಾಸ ಭಟ್ ನಿಧನ

ಮೂಡುಬಿದಿರೆ : ಪುತ್ತಿಗೆ ಗ್ರಾಮದ ಹಿರಿಯ ಅರ್ಚಕ, ಶತಾಯುಷಿ ಅಡಿಗಳ್ ಶ್ರೀನಿವಾಸ ಭಟ್ (100) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸುಮಾರು 65 ವರ್ಷಗಳ ಕಾಲ ಸೋಮನಾಥೇಶ್ವರ ಹಾಗೂ ಸಪರಿವಾರ ದೇವರುಗಳ ಪ್ರಧಾನ ಅರ್ಚಕರಾಗಿ

ವಿದ್ಯಾರ್ಥಿನಿಗೆ ಹೃದಯಾಘಾತ : ಸಮಯಪ್ರಜ್ಞೆ ಮೆರೆದ ಚಾಲಕ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು, ಚಾಲಕ ಹಾಗು ನಿರ್ವಾಹಕ ಬಸ್ಸನ್ನು ಆಂಬುಲೆನ್ಸ್ ಮಾದರಿಯಲ್ಲಿ ಚಲಾಯಿಸಿ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ. ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 13ಈ ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ಸು ಎಂದಿನಂತೆ ಕುಳೂರು ಮಾರ್ಗವಾಗಿ

ಬ್ರಹ್ಮಾವರ: ಬಾರ್ಕೂರಿನಲ್ಲಿ ವನ ಮಹೋತ್ಸವ ಕಾರ್ಯಕ್ರಮ

ರೋಟರಿ ಕ್ಲಬ್ ಬಾರ್ಕೂರು ಆಶ್ರಯದಲ್ಲಿ ಬಾರ್ಕೂರು ಅಂಚೆ ಕಛೇರಿ ಬಳಿ ವನ ಮಹೋತ್ಸವ ಮತ್ತು850 ಉಚಿತ ಔಷಧಿ ಗಿಡ ಹಾಗೂ ಹಣ್ಣಿನ ಗಿಡ ವಿತರಣೆ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಬಾರಕೂರು ರೋಟರಿಯ ಗಣೇಶ್ ಶೆಟ್ಟಿ ಮಾತನಾಡಿ, ಮನು ಕುಲದ ಸೇವೆಯಲ್ಲಿ ಮೂಂಚೂಣಿಯಲ್ಲಿರುವ ರೋಟರಿ ಬಾರಕೂರು ಮುಂದಿನ ಮಾನವ ಜನಾಂಗ ಆರೋಗ್ಯದಿಂದ ಇರಲು ಮನುಷ್ಯನ ಉಸಿರಿಗೆ ಕಾರಣವಾಗುವ ಉತ್ತಮ

ಸುಳ್ಯ: ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ: ಕೋಶಾಧಿಕಾರಿಯಾಗಿ ಪುಷ್ಪರಾಜ್ ಶೆಟ್ಟಿ ಆಯ್ಕೆ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದಯಾನಂದ ಕಲ್ನಾರ್ ವಹಿಸಿದ್ದರು. ಸಭೆಯ ಕಾರ್ಯಕಲಾಪಗಳ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷತೆಗೆ ಲೋಕೇಶ್ ಪೆರ್ಲಂಪಾಡಿ ಮತ್ತು ಪ್ರಜ್ಞಾ ಎಸ್. ನಾರಾಯಣ್ ಸ್ಪರ್ಧಿಸಿದ್ದರು.‌ ಅಧ್ಯಕ್ಷತೆಗೆ ಚುನಾವಣೆ ನಡೆದು ಅಧ್ಯಕ್ಷರಾಗಿ

ಸದನದಲ್ಲಿ ತುಳುವಿಗಾಗಿ ಹೋರಾಟ – ತುಳು ಅಕಾಡೆಮಿಯಿಂದ ಶಾಸಕರಿಗೆ ಸನ್ಮಾನ

ಪುತ್ತೂರು: ವಿಧಾನಸಭಾ ಅಧಿವೇಶನದಲ್ಲಿ ತುಳು ವಿನಲ್ಲೇ ಮಾತನಾಡುವ ಮೂಲಕ ,ತಾನು ಶಾಸಕನಾಗಿ ಆಯ್ಕೆಯಾದ ಮೊದಲ ಅಧಿವೇಶನದಲ್ಲೂ ತುಳು ಬಗ್ಗೆ ಸದನಕ್ಕೆ ಪರಿಚಯಿಸುವ ಮೂಲಕ ತುಳುವಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಕರ್ನಾಟಕ ರಾಜ್ಯ ತುಳು ಅಕಾಡೆಮಿಯಿಂದ ಗೌರವ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.ಕರ್ನಾಟಕ ತುಳು ಅಕಾಡೆಮಿ

ಆಟಿಡು ಒಂಜಿ ದಿನ ಕಾರ್ಯಕ್ರಮ:ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ

ಬಿಲ್ಲವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಮುಂಡ್ಕೂರು, ಮುಲ್ಲಡ್ಕ, ಇನ್ನಾ, ಇದರ ವತಿಯಿಂದ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಆಟಿಡು ಒಂಜಿ ದಿನ ಕಾರ್ಯಕ್ರಮ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆಯಿತು. ತೋಟ ಮನೆ ಉಷಾ ವಾಸು ಅಂಚನ್ ದೀಪ ಬೆಳಗಿಸಿ ಕಾರ್ಯಕ್ರಮನ್ನು ಉದ್ಘಾಟಿಸಿದರು. ವಿದ್ಯಾ ವರ್ಧಕ ಪದವಿ ಪೂರ್ವ ಕಾಲೇಜಿನ

ಕಾರ್ಕಳ : ಟಿಪ್ಪರ್ ಬೈಕ್ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಕಾರ್ಕಳ : ಟಿಪ್ಪರ್ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ನಗರ ಠಾಣೆ ವ್ಯಾಪ್ತಿ ಪುಲ್ಕೇರಿ ಎಂಬಲ್ಲಿ ನಡೆದಿದೆ.ಮೃತ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಹಲಕ್ಕೀಕೆರೆ ನಿವಾಸಿ ಕತ್ತರಿ ಸಾಣೆ ಇಮ್ತಿಯಾಜ್ ರವರ ಪುತ್ರ ನಿಜಾಮ್ (22)ಎಂದು ಗುರುತಿಸಲಾಗಿದೆ.ಕಾರ್ಕಳ ಸಾಣೂರು ನಿಂದ ತನ್ನ ಕೆಲಸಕ್ಕೆಂದು ಬೆಳಗ್ಗೆ 10.30ರ ಸುಮಾರಿಗೆ ಕಾರ್ಕಳ

ಮೂಡುಬಿದಿರೆ: ಗ್ಯಾಸ್ ಗೀಸರ್ ಕೆಮಿಕಲ್ ಸ್ಪ್ರೆಡ್: ಉಸಿರುಗಟ್ಟಿ ಮೃತಪಟ್ಟ ಯುವಕ

ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಕೆಮಿಕಲ್ ಸ್ಪ್ರೆಡ್ ಆಗಿ ಸ್ನಾನಗೃಹದಲ್ಲಿ ಯುವಕನೋರ್ವ ಉಸಿರುಗಟ್ಟಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಕೋಟೆಬಾಗಿಲಿನಲ್ಲಿ ಸಂಭವಿಸಿದೆ.ಕೋಟೆಬಾಗಿಲಿನ ಪ್ಲಾಟ್ ಒಂದರಲ್ಲಿ ವಾಸವಾಗಿರುವ ದಿ.ಅನ್ಸಾರ್ ಎಂಬವರ ಪುತ್ರ ಶಾರಿಕ್ ( 18) ಎಂಬವನೇ ಮೃತಪಟ್ಟ ಯುವಕ.ಪ್ಲಾಟ್ ನಲ್ಲಿ ಶಾರಿಕ್ ಮತ್ತು ಆತನ ತಾಯಿ ವಾಸವಾಗಿದ್ದರು.ರಾತ್ರಿ ಶಾರಿಕ್

ಮೂಡುಬಿದಿರೆ: ಕಾಲು ಜಾರಿ ಬಿದ್ದು ಸಮಾಜ ಮಂದಿರ ಸಭಾದ ವಾಚ್ ಮೆನ್ ಸಾವು

ಮೂಡುಬಿದಿರೆಯ ಸಮಾಜ ಮಂದಿರ ಸಭಾದಲ್ಲಿ ವಾಚ್ ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಕುಮಾರ್ ಹೆಗ್ಡೆ (56 ವ) ಅವರು ಬಿಪಿ ಹೈ ಆಗಿ ಸೋಮವಾರ ಬೆಳಿಗ್ಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕೊಕ್ರಾಡಿಯ ನಿವಾಸಿ ಸುಕುಮಾರ್ ಹೆಗ್ಡೆ ಅವರು ಕಳೆದ 5 ವರ್ಷಗಳಿಂದ ಸಮಾಜ ಮಂದಿರದಲ್ಲಿ ವಾಚ್ ಮೆನ್ ಆಗಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದು, ಹಗಲಿನಲ್ಲಿ ಬೇರೆ

ಮಂಗಳೂರು: ಸ್ಪೀಕರ್ ಯು.ಟಿ. ಖಾದರ್ ಅವರಿಗೆ ತುಳು ಅಕಾಡೆಮಿಯಿಂದ ಸನ್ಮಾನ

ಕರ್ನಾಟಕ ವಿಧಾನಸಭೆಯಲ್ಲಿ ತುಳು ಭಾಷೆಯನ್ನು ಮಾತನಾಡಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಂಗಳೂರಲ್ಲಿ ಸನ್ಮಾನಿಸಿದರು. ಖಾದರ್ ಅವರಿಗೆ ಸಾಲು ಹಾಗೂ ಪುಸ್ತಕ ಮತ್ತು ಸ್ಮರಣಿಕೆ ನೀಡಿ, ಅಭಿನಂದಿಸಿದರು. ಈ ವೇಳೆ ತುಳು ಸಾಹಿತ್ಯ