ಮೂಡುಬಿದಿರೆ: ಕಾಲು ಜಾರಿ ಬಿದ್ದು ಸಮಾಜ ಮಂದಿರ ಸಭಾದ ವಾಚ್ ಮೆನ್ ಸಾವು

ಮೂಡುಬಿದಿರೆಯ ಸಮಾಜ ಮಂದಿರ ಸಭಾದಲ್ಲಿ ವಾಚ್ ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಕುಮಾರ್ ಹೆಗ್ಡೆ (56 ವ) ಅವರು ಬಿಪಿ ಹೈ ಆಗಿ ಸೋಮವಾರ ಬೆಳಿಗ್ಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಕೊಕ್ರಾಡಿಯ ನಿವಾಸಿ ಸುಕುಮಾರ್ ಹೆಗ್ಡೆ ಅವರು ಕಳೆದ 5 ವರ್ಷಗಳಿಂದ ಸಮಾಜ ಮಂದಿರದಲ್ಲಿ ವಾಚ್ ಮೆನ್ ಆಗಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದು, ಹಗಲಿನಲ್ಲಿ ಬೇರೆ ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅವರಿಗೆ ಉಳಿದುಕೊಳ್ಳಲು ಸಮಾಜ ಮಂದಿರದ ವತಿಯಿಂದಲೇ ಅಲ್ಲಿಯೇ ರೂಮ್ ನೀಡಲಾಗಿತ್ತು.

ಸೋಮವಾರ ಬೆಳಿಗ್ಗೆ ಸುಕುಮಾರ್ ಅವರು ಹೊಟೇಲ್ ಗೆ ತೆರಳಿ ಉಪಹಾರ ಸೇವಿಸಿ ಮರಳಿ ಬಂದಿದ್ದರು. ಈ ಸಂದರ್ಭ ರಕ್ತದೊತ್ತಡ ಹೆಚ್ಚಾಗಿ ಸ್ವಾಧೀನ ಕಳೆದುಕೊಂಡು ಕೆಳಗೆ ಬಿದ್ದಿದ್ದು ಆಗ ತಲೆಗೆ ತೀವೃ ತರಹದ ಏಟಾಗಿ ಅಧಿಕ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಹಗಲು ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಆಗಮಿಸಿದ್ದ ವಾಚ್ ಮೆನ್ ಮತ್ತು ಕೆಲಸದಾಳುವಿನ ಗಮನಕ್ಕೆ ಈ ಘಟನೆ ತಿಳಿದು ಬಂದಿದ್ದು ತಕ್ಷಣ ಅವರು ಸಮಾಜ ಮಂದಿರಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್‌ಅವರ ಗಮನಕ್ಕೆ ತಂದಿದ್ದಾರೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ ಪಿಜಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಸುಕುಮಾರ್ ಹೆಗ್ಡೆ ಅವರಿಗೆ ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ.

add - BDG

Related Posts

Leave a Reply

Your email address will not be published.