HomeFresh Newsಪುತ್ತೂರು: ಗೆಜ್ಜೆಗಿರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಗೆಜ್ಜೆಗಿರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಡಗನ್ನೂರುಃ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ (ರಿ.) ಶ್ರೀ ಕ್ಷೇತ್ರ ಗೆಜ್ಜೆಗಿರಿ ವರ್ಷಾವಧಿ ಜಾತ್ರೋತ್ಸವವು ಫೆ.25 ರಿಂದ 28 ತನಕ ನಡೆಯಲಿದ್ದು ಇದರ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪ್ರಾರಂಭದಲ್ಲಿ ಶ್ರೀ ಕ್ಷೇತ್ರದ ಸರ್ವಶಕ್ತಿಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಗೆಜ್ಜೆಗಿರಿ ಕ್ಷೇತ್ರಾಢಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ,ರವರು ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ವಿಶ್ವದಾದ್ಯಂತ ಇರುವ ಕ್ಷೇತ್ರ ಭಕ್ತಾಧಿಗಳು ತುಳುನಾಡಿನ ಕಾರಣಿಕ ಶಕ್ತಿಗಳ ಮೂಲಕ್ಷೇತ್ರದ ನೇಮೋತ್ಸವ ಮತ್ತು ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗುವಂತೆ ಹೇಳಿ ಶುಭ ಹಾರೈಸಿದರು.
ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶೈಲೇಂದ್ರ ವೈ ಸುವರ್ಣ, ಮಂಗಳೂರು ಮಾತನಾಡಿ ಸಮಾಜದ ಎಲ್ಲಾ ಸಂಘಸಂಸ್ಥೆಗಳು ಜಾತ್ರಾ ಮಹೋತ್ಸವ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶೈಲೇಂದ್ರ ವೈ ಸುವರ್ಣ, ಮಂಗಳೂರು ಹಾಗೂ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಕೆ ಪೂಜಾರಿ ಇವರುಗಳನ್ನು ಕ್ಷೇತ್ರದ ಪರವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕಂಕನಾಡಿ ಕ್ಷೇತ್ರದ ಅಧ್ಯಕ್ಷ ಶ್ರೀ ಕೆ ಚಿತ್ತರಂಜನ್ ಗೌರವಾಧ್ಯಕ್ಷ ಜಯಂತ್ ನಡುಬೈಲು, ಉಪಾಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ, ನಿತ್ಯಾನಂದ ಡಿ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಗುರುಪುರ, ಚಂದ್ರಶೇಖರ್ ಉಚ್ಚಿಲ್, ಸಂಜೀವ ಪೂಜಾರಿ,ಬಿರ್ವ, ಸುರೇಂದ್ರ ಪೂಜಾರಿ ಮುಂಬಯಿ, ಡಾ ರಾಜಾರಾಂ ಉಪ್ಪಿನಂಡಿ ಸುರೇಶ್ ಪೂಜಾರಿ ಅಳದಂಗಡಿ, ಡಿ ಆರ್ ರಾಜು ಪೂಜಾರಿ ಕಾರ್ಕಳ, ಯುವವಾಹಿನಿ ಕೆಂದ್ರಸಮಿತಿ ಅಧ್ಯಕ್ಷ ಹರೀಶ್ ಕೆ ಪೂಜಾರಿ, ಗೆಜ್ಜೆಗಿರಿ ವಕ್ತಾರ ರಾಜೇಂದ್ರ ಚಿಲಿಂಬಿ,ಸಮಿತಿ ಸದಸ್ಯರಾದ ವಿದ್ಯಾರಾಖೇಶ್ ಮಂಗಳೂರು, ಡಾ, ರಾಕೇಶ್ ಕುಮಾರ್, ನಾರಾಯಣ ಪೂಜಾರಿ ಮಚ್ಚಿನ, ಪ್ರವೀಣ್ ಅಂಚನ್ ಅರ್ಕುಲ, ಡಾ ಸಂತೋಷ್ ಕುಮಾರ್ ಪೆರಂ,ಪಳ್ಳಿ,ದೀಪಕ್ ಪಿಲಾರ್, ಶೇಖರ ಬಂಗೇರ ಬೆಳ್ತಂಗಡಿ, ಜಯರಾಮ ಬಂಗೇರ ಬೆಳ್ತಂಗಡಿ, ತ್ರಿವೇಣಿ ಕರುಣಾಕರ ಪೆರೋಡಿ, ಶೇಖರ ಪೆರೋಡಿ, ಉಮಾನಾಥ ಮಂಗಳೂರು, ಕೇಶವ ಎಂ ಎಸ್, ರಕ್ಷೀತ್ ಕುಂಪಾಳ, ಪ್ರಶಾಂತ್ ಬೆಳ್ತಂಗಡಿ ನೀಲಯ್ಯ ಮಳಲಿ, ಮತ್ತಿತರರು ಗಣ್ಯರು, ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಪುತ್ತೂರು ಸ್ವಾಗತಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments