HomeFresh Newsಪಡುಮಾನಾ೯ಡು ಗ್ರಾ. ಪಂ ಸದಸ್ಯ ನೇ*ಣಿಗೆ ಶರಣು

ಪಡುಮಾನಾ೯ಡು ಗ್ರಾ. ಪಂ ಸದಸ್ಯ ನೇ*ಣಿಗೆ ಶರಣು

ಮೂಡುಬಿದಿರೆ : ಸಮಾಜ ಸೇವಕ, ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಮೂಡುಮಾನಾ೯ಡಿನ ನಿವಾಸಿ ಶ್ರೀನಾಥ್ ಸುವಣ೯ ಅವರ ಮೃತದೇಹವು ಶ್ಮಶಾನಕ್ಕಾಗಿ ಮೀಸಲಿಟ್ಟ ಪಡ್ಡೇಲು ಎಂಬ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.

ಕಳೆದ ಹಲವು ವಷ೯ಗಳಿಂದ ಬಿಜೆಪಿ ಕಾಯ೯ಕತ೯ರಾಗಿದ್ದ ಶ್ರೀನಾಥ್ ಸುವರ್ಣ ಅವರು ನಂತರ ಪಡುಮಾನಾ೯ಡು ಗ್ರಾ. ಪಂ.ನಲ್ಲಿ ಸ್ಪಧಿ೯ಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಸದಸ್ಯರಾಗಿದ್ದ ಅವರು ಅವರೇ ಹೆಚ್ಚು ಆಸಕ್ತಿ ವಹಿಸಿ ಅವರದ್ದೇ ವಾಡಿ೯ನಲ್ಲಿ ಶ್ಮಶಾನಕ್ಕಾಗಿ ಮೀಸಲಿಟ್ಟಿರುವ ಪಡ್ಡೇಲು ಎಂಬ ಜಾಗದಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ನಿಮಾ೯ಣಗೊಂಡಿರುವ ಟ್ಯಾಂಕ್ ನ ಸ್ಟೇರ್ ಕೇಸ್ ಗೆ ಹಗ್ಗವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಮಾಜಸೇವೆಯ ಮೂಲಕವೂ ಗುರುತಿಸಿಕೊಂಡಿದ್ದ ಅವರು ಮೂಡುಮಾನಾ೯ಡು ಪ್ರಾಥಮಿಕ ಶಾಲೆಗಾಗಿ ಅಡಿಕೆ ತೋಟವನ್ನು ಶಾಲೆಯ ಆವರಣದಲ್ಲಿ ನಿಮಿ೯ಸಿದ್ದರು. ಬೆಳುವಾಯಿ ಸಹಕಾರಿ ಸಂಘದ ನಿರ್ದೇಶಕರೂ ಆಗಿದ್ದ ಹಲವಾರು ಸಮಾಜ ಸೇವೆಗಳನ್ನು ಮಾಡಿ ಗುರುತಿಸಿಕೊಂಡಿದ್ದರು. ಕಳೆದ ಒಂದು ತಿಂಗಳ ಹಿಂದೆ ಶ್ಮಶಾನಕ್ಕೆ ಹೋಗುವ ರಸ್ತೆಗೆ ಕಾಂಕ್ರೀಟ್ ಕೂಡಾ ಹಾಕಿಸಿದ್ದಾರೆನ್ನಲಾಗಿದೆ.

ಪತ್ನಿ, ಪುತ್ರ, ತಾಯಿ ಸಹೋದರರು ಹಾಗೂ ಬಂಧು ಮಿತ್ರರನ್ನು ಆಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments