ಮೂಡುಬಿದಿರೆ:ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ ನವದೆಹಲಿ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ ಆಶ್ರಯದಲ್ಲಿ ನಡೆದ 36ನೇ ಅಂತರ ವಿಶ್ವವಿದ್ಯಾಲಯ ಸೌತ್ ಈಸ್ಟ್ ಇಂಡಿಯಾ ವಲಯ ಯುವಜನ ಮೇಳದ ಏಕಾಂಕ ನಾಟಕ ಪ್ರಥಮ ಹಾಗೂ ಜಾನಪದ ನೃತ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಆಳ್ವಾಸ್ ಕಾಲೇಜು ರಾಷ್ಟç ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಆಳ್ವಾಸ್ ಕಾಲೇಜು ತಂಡವು
ಮೂಡುಬಿದಿರೆ: 74ನೇ ಗಣರಾಜ್ಯೊತ್ಸವ ಪ್ರಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್.ವಿನಯ ಹೆಗ್ಡೆ ಧ್ವಜಾರೋಹಣಗೈದರು. ನಂತರ ಮಾತನಾಡಿದ ಅವರು ನಮ್ಮ ದೇಶದಲ್ಲಿ ಹಲವು ತಿದ್ದುಪಡಿಗಳು ಶಾಸಕಾಂಗದ ಸರಳ ಬಹುಮತದಲ್ಲಿ ಅಂಗೀಕೃತಗೊಳ್ಳುತ್ತಿವೆ. ಆ ತಿದ್ದುಪಡಿಗಳೂ ರಾಜಕೀಯ ಪಕ್ಷಗಳ ಉದ್ದೇಶ ಈಡೇರಿಕೆಗಾಗಿ ನಡೆಯುತ್ತಿವೆ. ಹೀಗಾಗಿ, ಅತ್ಯುತ್ತಮ
ಮೂಡುಬಿದಿರೆ: ಪಂಚಾಯತ್ ಗೆ ನೀಡಿರುವ ವಿದ್ಯುತ್ ಬಿಲ್ಲ್ ಗಳಲ್ಲಿ ಆಗಿರುವ ಲೋಪ ದೋಷಗಳ ಬಗ್ಗೆ ಪಂಚಾಯತ್ ಪಿಡಿಒ ಸಹಿತ ಸದಸ್ಯರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಪುತ್ತಿಗೆಯಲ್ಲಿ ಶನಿವಾರ ನಡೆದಿದೆ. ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆದ ಮೆಸ್ಕಾಂ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಕಂಚಿಬೈಲು ಬೋರ್ ವೆಲ್ ಗೆ ಸಂಬಂಧಿಸಿದಂತೆ ಮಾಸಿಕ ಸರಾಸರಿ 600ರಿಂದ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆ ,ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ, ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಾಳೆ (ಜ.20)ಸಂಜೆ 6.45 ಕ್ಕೆ ಯಕ್ಷ ರಂಗಾಯಣ ಕಾರ್ಕಳ ಇದರ ಕಲಾವಿದರು ಅಭಿನಯಿಸುವ ಪರಶುರಾಮ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಶಶಿರಾಜ್ ಕಾವೂರು ರಚಿಸಿದ ಈ ನಾಟಕವನ್ನು ಡಾ||ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವರು ನಾಟಕ
ಪಡುಮಾರ್ನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ರೂ 9ಕೋ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಮೂಡುಬಿದಿರೆ:ಜನಸೇವಕನಾಗಿ ಆರಿಸಿ ಬಂದು ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದೇನೆಂಬ ಆತ್ಮತೃಪ್ತಿ ನನಗಿದೆ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.ಅವರು ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೂ.9ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಮೂಡುಬಿದಿರೆ: ಅಯ್ಯಪ್ಪ ವೃತದಾರಿ ಮೂಡುಬಿದಿರೆ ಮಿಜಾರು ಸಮೀಪದ ಕೊಪ್ಪದ ಕುಮೇರು ಶೇಖರ ಪೂಜಾರಿ (74) ಅವರು ಶಬರಿಮಲೆಗೆ ಹೋಗಿದ್ದ ವೇಳೆ ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಶೇಖರ ಪೂಜಾರಿ ಅವರು ಕಳೆದ 48 ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಯಾಗಿ ಶಬರಿಮಲೆಗೆ ಯಾತ್ರೆ ಹೋಗುತ್ತಿದ್ದರು. ಮೂಡುಬಿದಿರೆ ಪರಿಸರದಲ್ಲಿ ಹಿರಿಯ ಮಾಲಾಧಾರಿಯಾಗಿದ್ದ ಅವರು ಈ ವರ್ಷ 48 ನೇ ವರ್ಷದ ಮಾಲಾಧಾರಿಯಾಗಿದ್ದರು. ಯಾತ್ರೆ ಕೈಗೊಂಡಿದ್ದ ಅವರು ಭಾನುವಾರ ಇರುಮುಡಿ ಹೊತ್ತು
ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಕೆಸರ್ಗದ್ದೆಯ ನಿವಾಸಿಯೊಬ್ಬರು ಕುವೈಟ್ನಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾದ ಘಟನೆ ಸೋಮವಾರ ನಡೆದಿದೆ. ಮೃತ ವ್ಯಕ್ತಿ ರೋಷನ್ ಹೆಗ್ಡೆ (46)ಎಂದು ತಿಳಿದುಬಂದಿದೆ. ಇವರು ನಿವೃತ್ತ ಶಿಕ್ಷಕಿ ಕೆಸರ್ಗದ್ದೆಯ ನಳಿನಿ ರಾಮಚಂದ್ರ ಹೆಗ್ಡೆ ಅವರ ಪುತ್ರ. ಕಳೆದ ತಿಂಗಳು ತನ್ನ ಮಾವನ ಮಗನ ಮದುವೆ ಕಾರ್ಯಕ್ರಮಕ್ಕೆ ಪತ್ನಿ ಹಾಗೂ ಮಗನೊಂದಿಗೆ ಊರಿಗೆ ಬಂದಿದ್ದ ಅವರು ಕಾರ್ಯಕ್ರಮ ಮುಗಿಸಿ ಕುವೈಟ್ಗೆ ವಾಪಾಸಾಗಿದ್ದರು. ಸೋಮವಾರ
ಮೂಡುಬಿದಿರೆ: ದರೆಗುಡ್ಡೆ ಗ್ರಾಮದ ಕೆಲ್ಲಪುತ್ತಿಗೆ ಪುರಾತನ ಶ್ರೀ ಭೂತರಾಜ ಕ್ಷೇತ್ರದಲ್ಲಿ ಭೂತರಾಜ, ಬ್ರಹ್ಮದೇವರು ಧರ್ಮರಸು, ಕಕ್ಕಿನಂತಾಯ, ಕೊಡಮಣಿತ್ತಾಯ ಬ್ರಹ್ಮಬೈದರ್ಕಳ, ಮಾಯಂದಾಲೆ ಸಾನಿಧ್ಯ ದೇವತೆಗಳ ಗುಡಿಗಳನ್ನು ಜೀರ್ಣೋದ್ಧಾರಗೊಳಿಸಿದ್ದು, ಪುನರ್ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ರಂಗಪೂಜಾ ನೇಮೋತ್ಸವವು ಮಂಗಳವಾರ ನಡೆಯಿತು. ಬೆಳಿಗ್ಗೆ ಕೆಲ್ಲಪುತ್ತಿಗೆ ಪರಾಡಿಗುತ್ತಿನಿಂದ ಭೂತರಾಜ ಕ್ಷೇತ್ರಕ್ಕೆ ಸಕಾಲ ಬಿರುದಾವಳಿಗಳೊಂದಿಗೆ ದೈವಗಳ
ಮೂಡುಬಿದಿರೆ: ನವೆಂಬರ್ 2022 ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ 10 ಜನ ವಿದ್ಯಾರ್ಥಿಗಳು ಗ್ರೂಪ್ -01 ಮತ್ತು ಗ್ರೂಪ್-02 ವಿಭಾಗದಲ್ಲಿ ಉತ್ತೀರ್ಣರಾಗಿ, 32.25% ಫಲಿತಾಂಶ ಪಡೆದಿದ್ದಾರೆ. ಕಾಲೇಜಿನ ಬಿ.ಕಾಂ. ಪ್ರೊಫೆಶನಲ್ ವಿದ್ಯಾರ್ಥಿಗಳಾದ ಆರನ್ ರೇಗೋ(486), ಚೇತನಾ ಕೋಡಿಹಳ್ಳಿ(471), ತುಳಸಿ(446), ಲೋಹಿತ್ ಈಶ್ವರ್ ಮೊಗೇರ್ (440), ವಿನಿಶಾ ಎಸ್. ಎಂ.(432), ಸುಶ್ಮಾ ಹೆಚ್.ಪಿ, ಶ್ರೀವತ್ಸ ಎಂ.,ಪ್ರೇರಣಾ ಎಸ್
ಮೂಡುಬಿದಿರೆ: ಮೂಲ್ಕಿ ತಾಲೂಕು ಹಾಗೂ ಮೂಡುಬಿದಿರೆ ತಾಲೂಕುಗಳನ್ನು ಒಳಗೊಂಡ ಬಳಕೆದಾರರ ಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಮೂಡುಬಿದಿರೆಯ ಅರುಣ್ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಡಾ.ಶಿವರಾಜ್ ಅರಸು ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳು: ಯು ಪದ್ಮನಾಭ ಶೆಟ್ಟಿ( ಗೌರವಾಧ್ಯಕ್ಷರು), ಕೆ.ವೇದವ್ಯಾಸ ಉಡುಪ, ಜೈಸನ್ ತಾಕೋಡೆ(ಉಪಾಧ್ಯಕ್ಷರು), ಡಾ.ರವೀಶ್ ಕುಮಾರ್ ಎಂ.( ಸಂಚಾಲಕರು), ದಯಾನಂದ ನಾಯ್ಕ್( ಜೊತೆ ಕಾರ್ಯದರ್ಶಿ), ಅಶೋಕ್ ಕಟೀಲ್( ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ.