ಕಳೆದ ಹನ್ನೆರಡು ವರುಷಗಳಲ್ಲಿ ಭಾರತದ ರೂಪಾಯಿ ಡಾಲರ್ ಎದುರು ಕೆಳಗಡೆಗೆ ಬಿದ್ದಿದ್ದು, 2026ರಲ್ಲಿ ಏಶಿಯಾದಲ್ಲೇ ಕಳಪೆ ಎನ್ನಲಾಗಿದೆ.
ಒಂದು ಡಾಲರಿಗೆ ತೊಂಬತ್ತಾರು ರೂಪಾಯಿ ಆಗಿರುವುದು, ಇನ್ನೇನು ನೂರು ರೂಪಾಯಿಯ ಶತಕ ಬಾರಿಸುತ್ತದೆ ಎನ್ನುವುದು ಹಣಕಾಸು ಪಂಡಿತರ ಅಂದಾಜು.
ಏಶಿಯಾದ ಹಣಗಳಲ್ಲಿ ಯುಎಸ್ಎ ಡಾಲರ್ ಎದುರು ಚೀನಾದ ಯುವಾನ್, ಮಲೇಶಿಯಾದ ರಿಂಗೆಟ್ ಮತ್ತು ಸಿಂಗಾಪುರದ ಡಾಲರ್ಗಳು ಮಾತ್ರ ಕುಸಿದಿಲ್ಲ. ಅಷ್ಟೇ ಅಲ್ಲ ಈ ಮೂರು ಏಶಿಯಾದ ಹಣಗಳು ಡಾಲರ್ ಎದುರು ತುಸು ಹೆಚ್ಚು ಬಲಗೊಂಡಿವೆ ಹಾಗಾಗಿ ಪ್ಲಸ್ನಲ್ಲಿವೆ. ಭಾರತದ ಹಣ 2026 ಒಂದು ವರುಷದಲ್ಲೇ 7.6 ಮೈನಸ್ ಇಳಿವಣಿಗೆ ಕಂಡಿದೆ. ಹಾಗಾಗಿ ಯುಎಸ್ಎ ಡಾಲರ್ ಎದುರು ಹೆಚ್ಚು ಕುಸಿದ ಏಶಿಯಾದ ಹಣ ಎಂದರೆ ಭಾರತದ ರೂಪಾಯಿ ಎನ್ನಲಾಗಿದೆ.
ಹಾಂಗ್ ಕಾಂಗ್ ಡಾಲರ್, ತೈವಾನ್ ಡಾಲರ್, ಜಪಾನಿನ ಯೆನ್, ತಾಯ್ಲ್ಯಾಂಡಿನ ಬಹ್ತ್, ಕೊರಿಯಾದ ವೊನ್, ಇಂಡೋನೇಶಿಯಾದ ರುಪೈಯ ಕೂಡ ಮೈನಸ್ ಕಂಡರೂ ಭಾರತದ ರೂಪಾಯಿಯಷ್ಟು ಜಾರಿಲ್ಲ.
