HomeFresh Newsಮಂಗಳೂರು: ನಾಪತ್ತೆಯಾಗಿದ್ದ ಎಕ್ಕೂರಿನ ದಯಾನಂದ್ ಪತ್ತೆ

ಮಂಗಳೂರು: ನಾಪತ್ತೆಯಾಗಿದ್ದ ಎಕ್ಕೂರಿನ ದಯಾನಂದ್ ಪತ್ತೆ

ಕಳೆದ ಜೂನ್ 3 ರಂದು ಕೆಲಸಕ್ಕೆಂದು ಹೋಗಿ ನಾಪತ್ತೆಯಾಗಿದ್ದ ಮಂಗಳೂರಿನ ಎಕ್ಕೂರು ನಿವಾಸಿ ದಯಾನಂದ್ ಅವರು ಕೊನೆಗೂ ಪತ್ತೆಯಾಗಿದ್ದಾರೆ.

ಜೂನ್ 3 ರ ಬುಧವಾರ ಬೆಳಗ್ಗೆ ಕುಲಶೇಖರದ ಡೈರಿಗೆ ಕೆಲಸಕ್ಕೆಂದು ತೆರಳಿದ್ದ 47 ವರ್ಷದ ದಯಾನಂದ್ ಅವರು ಸಂಜೆಯಾದರೂ ಮನೆಗೆ ಮರಳದೆ ನಾಪತ್ತೆಯಾಗಿದ್ದರು. ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಇವರಿಗಾಗಿ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ಹುಡುಕಾಟ ನಡೆಸಿದ್ದರು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲೂ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದೀಗ ತೀವ್ರ ಹುಡುಕಾಟದ ಬಳಿಕ ದಯಾನಂದ್ ಅವರು ಸುರಕ್ಷಿತವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರು ನಿರಾಳವಾಗಿದ್ದಾರೆ.”

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments